ಮೂಡಿಗೆರೆ : ಗಣಪತಿ ಮೂರ್ತಿ ಎಂದರೆ ಹಿಂದೂ ಧರ್ಮದಲ್ಲಿ ಅಡೆತಡೆಗಳನ್ನು ನಿವಾರಿಸುವ ಮತ್ತು ಸಮೃದ್ಧಿಯ ಸಂಕೇತವಾದ ಗಣೇಶನ ವಿಗ್ರಹ ಮೂರ್ತಿ. ಇದನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮೂಡಿಗೆರೆ ಪಟ್ಟಣದ ಅಡ್ಯಂತಯ ರಂಗ ಮಂದಿರದಲ್ಲಿ ಗಣೇಶನ ಪ್ರತಿಷ್ಟಾಪನೆ ಕುರಿತು ಕಸಬಾ ಹೋಬಳಿ ಮಟ್ಟದ ಸಭೆ ಪಟ್ಟಣ ಪಂಚಾಯಿತಿ ಸದಸ್ಯರ ಹಾಗೂ ಮಾಜಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಸಮಿತಿ ಕಾರ್ಯದರ್ಶಿ ರಘು ಜನ್ನಾಪುರ, 30 ವರ್ಷಗಳ ಬಳಿಕ ಮೂಡಿಗೆರೆ ಇತಿಹಾಸದಲ್ಲಿ ಮೊದಲ ಬಾರಿ ಗಣಪತಿ ಲೋಗೋ ಲೋಕಾರ್ಪಣೆ ಹಿನ್ನಲೆ ದಿನಾಂಕ ಜುಲೈ 29ರಂದು ಅನೇಕ ಗಣ್ಯರು ಭಾಗಿಯಾಗಲಿದ್ದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಮನವಿ ಮಾಡಿದರು. ಭಾಷಣಕ್ಕೆ ಸೀಮಿತವಾಗದೆ ನಾವೆಲ್ಲರೂ ಒಗ್ಗೂಡಿ ಹಿಂದೂ ಶಕ್ತಿ ತೋರಿಸೋಣ ಎಂದರು.
ಹಾಗೆ ಗಣಪತಿ ಸೇವಾ ಸಮಿತಿ ಖಜಾಂಚಿ ವಿನಯ್ ಹಳೇಕೋಟೆ ಮಾತನಾಡಿ, ಕಾರ್ಯಕ್ರಮದ ರೂಫುರೆಷೇಗಳ ಬಗ್ಗೆ ತಿಳಿಸಿದರು, ಧರ್ಮ ಜಾಗೃತಿ ಮಾಡಬೇಕು. ಜಾತಿಯತೆ ಪಕ್ಕಕ್ಕಿಟ್ಟು ಭಾರತೀಯ ಹಿಂದೂ ಎಂದು ಭಾವಿಸೋಣ, ಡೋಂಗಿಗಳನ್ನು ದೂರವಿಟ್ಟು ಸಂಪ್ರದಾಯ. ಆಚರಣೆಯ ಬಗ್ಗೆ ಗೌರವಿಸುವ ವ್ಯಕ್ತಿಗಳನ್ನು ಗುರುತಿಸಬೇಕು. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಪಕ್ಕಕ್ಕಿಟ್ಟು ಕೆಲಸ ಕಾರ್ಯ ಗಳಲ್ಲಿ ತೊಡಗಬೇಕು. ವಿವಿಧ ಭಾಗಗಳಿಂದ ನುಸುಳುಕೋರರು ರಾಜ್ಯಕ್ಕೆ ಲಗ್ಗೆ ಇಟ್ಟಿರುವುದು ಇಂತವರ ಬಗ್ಗೆ ಗಮನ ಹರಿಸಬೇಕು ಎಂದರು.
ಈ ಸಭೆಯಲ್ಲಿ ಅನೇಕರಿಗೆ ಗ್ರಾಮ ಪ್ರಮುಖರನ್ನು ನೇಮಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಕಸಬಾ ಹೋಬಳಿ ಅಧ್ಯಕ್ಷ ಪ್ರಶಾಂತ್ ಬೀದರಹಳ್ಳಿ. ಮಾತನಾಡಿ, ಪಂಚಾಯಿತಿ ಹಾಗೂ ಗ್ರಾಮ ಪ್ರಮುಖ್ ರನ್ನ ನೇಮಿಸಿರುವುದು ಉತ್ತಮ ವಿಚಾರ, ಗ್ರಾಮ ಮಟ್ಟದಲ್ಲಿ ಸಕ್ರಿಯ ಕೆಲಸ ಮಾಡಿ,ಯುವ ಸಮೂಹ ಧಾರ್ಮಿಕ ಕಾರ್ಯಕ್ರಮಗಳಿಗೆ ದೊಡ್ಡ ಶಕ್ತಿ ಎಂದರು.
ಈ ಸಂದರ್ಭದಲ್ಲಿ ಹಿಂದೂ ಮಹಾ ಗಣಪತಿ ಸಮಿತಿ ಕಸಬಾ ಉಪಾಧ್ಯಕ್ಷ ಸುಜಿತ್ ಹಳೇಮೂಡಿಗೆರೆ,ಸಂಜಯ್ ಕಡಿದಾಳ್, ಬ್ರಿಜೇಶ್ ಕಡಿದಾಳ್, ವಿಶ್ವ ಮುಗ್ರಹಳ್ಳಿ, ಸಂದೀಪ್ ಕೆಲ್ಲೂರು, ಅಜಿತ್ ಮುತ್ತಿಗೆಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.