ಚಿಕ್ಕಮಗಳೂರು: ಪಿಕಪ್ ಸಮೇತ ಯುವಕ ಭದ್ರಾ ನದಿಗೆ ಬಿದ್ದ ಪ್ರಕರಣ ಭಾರೀ ಮಳೆ ಹಿನ್ನೆಲೆ ರಸ್ತೆ ಕಾಣದೇ ಭದ್ರಾ ನದಿಗೆ ನುಗ್ಗಿದ್ದ ಪಿಕಪ್ ಕೊನೆಗೂ ಸತತ 23 ಗಂಟೆಯ ನಂತರ ಭದ್ರಾ ನದಿಯಲ್ಲಿ ಪಿಕಪ್ ಪತ್ತೆಯಾಯಿತು.
ಹೌದು .. ಜೀಪ್ ಮೇಲೆತ್ತಿದ್ದ ಅಗ್ನಿಶಾಮಕ, ಪೊಲೀಸರು ಹಾಗೂ ಸ್ಥಳೀಯರು ಆದರೆ ಪಿಕಪ್ ನಲ್ಲಿ ಸಿಗದ ಶಮಂತ್ ಮೃತದೇಹ ಹೀಗಾಗಿ ಇನ್ನೂ ಮೃತದೇಹಕ್ಕಾಗಿ ಮುಂದುವರೆದ ಶೋಧ ಕಾರ್ಯ ನಡೆಯುತ್ತಿದೆ.
ಕಳಸ ತಾಲೂಕಿನ ಕೊಳಮಾಗೆಯಲ್ಲಿ ಗುರುವಾರ ಸಂಜೆ ನಡೆದ ಘಟನೆಯಾಗಿದ್ದು ತಾಯಿ ಹಾಗೂ ಕಾರ್ಮಿಕರನ್ನ ಕರೆದುಕೊಂಡು ಬರಲು ಹೋಗ್ತಿದ್ದ ಶಮಂತ್ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಬಿದ್ದಿದ್ದ ಜೀಪ್ ಆ ನಂತರ ಸತತ 23 ಗಂಟೆಯ ನಂತರ ಭದ್ರಾ ನದಿಯಲ್ಲಿ ಜೀಪ್ ಮಾತ್ರ ಪತ್ತೆ ಹಚ್ಚಲಾಗಿದೆ.ಇನ್ನೂ ಶಮಂತ್ ಬಾಡಿ ಹುಡುಕಲು ಶೋಧ ಕಾರ್ಯ ಮುಂದುವರೆದಿದೆ.