ಮೂಡಿಗೆರೆ: ಕಾಫಿನಾಡಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ವಾರ್ಷಿಕ ಬೆಳೆಗಳಾದ ಅಡಿಕೆ, ಮೆಣಸು, ಕಾಫಿ, ಬೆಳೆಗಳು ಕೊಳೆ ರೋಗದಿಂದಾಗಿ ಉದುರುತ್ತಿದ್ದು ತಾವು ಬೆಳೆದಂತ ಬೆಳೆಗಳು ಮಣ್ಣು ಪಾಲಾಗುತ್ತಿದ್ದುನ್ನ ನೋಡಿ ರೈತರು ಕಂಗಲಾಗಿದ್ದಾರೆ

ಕಾಪಿ ಗಿಡಗಳು ಕೊಳೆತು ನಾರುತ್ತಿದ್ದೂ, ಮೆಣಸಿನ ತೆನೆ ಉದುರುತ್ತಿವೆ. ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಬೆಳೆ ನಷ್ಟದಿಂದ ಚಿಂತಾಮಗ್ನರಾಗಿದ್ದಾರೆ.ಈ ಬಾರಿ ವರುಣದೇವ ಮಲೆನಾಡಿಗೆ ಬೇಗ ಪ್ರವೇಶ ಪಡೆದು ರೈತರಲ್ಲಿ ನಡುಕ ಸೃಷ್ಟಿಸಿದ್ದಾನೆ,
ಮೂಡಿಗೆರೆ ತಾಲೂಕಿನ ಹೊಸಕೆರೆ, ಹೇರಿಕೆ, ಬೈರಾಪುರ ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಕಾಫಿ ಕುಯಿಲು ಅನ್ನೋದು ಮರೀಚಿಕೆಯದಂತಿದ್ದು ಇಲ್ಲಿನ ರೈತರ ಸ್ಥಿತಿ ಚಿಂತಾಜನಕವಾಗಿದೆ.
ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ಗಿಡಗಳು ಬೋಳವಾಗಿದ್ದಲ್ಲದೆ ಎಲೆ ಚುಕ್ಕಿ ರೋಗ, ಹಳದಿಎಲೆ ರೋಗಗಳ ಬರುವ ಸಾಧ್ಯತೆಗಳಿವೆ, ನಿರಂತರ ಮಳೆಯಿಂದಾಗಿ ಇಡಿ ಮಲೆನಾಡಿನಲ್ಲಿ ಶೀತದ ವಾತಾವರಣ ಹೆಚ್ಚಾಗಿದ್ದು ಕಾಯಿಲೆಗಳಿಂದ ಗಿಡಗಳು ಬೆಂಡಾಗಿವೆ ಗಿಡಗಳಿಗೆ ತಗುಲುವ ರೋಗಗಳಿಗೆ ಔಷದಿ ಸಿಂಪಡಿಸಲು ತೊಂದರೆಯಾಗಿದ್ದು ಉಪ ಬೆಳೆಗಳಾದ ಮೆಣಸು, ಎಲೆ ಉದುರಿ ಬಳ್ಳಿಗಳು ಸೊರಗಿ ಹೋಗುತ್ತಿವೆ
ಮಲೆನಾಡಿನ ಸಾಂಪ್ರದಾಯಿಕ ಬೆಳೆ ಹಾಗೂ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಮೆಣಸು, ಅಡಿಕೆ,ಬೆಳೆ ಇಲ್ಲಿನ ಜನರ ಮೂಲ ಆದಾಯವಾಗಿದೆ. ಮನೆ ಸೇರಬೇಕಿದ್ದ ಆದಾಯ ಮಣ್ಣು ಸೇರುತ್ತಿದ್ದೂ ಇದರ ಜೊತೆಗೆ ಕಾಡು ಪ್ರಾಣಿಗಳ ಹಾವಳಿ ರೈತರ ಸಂಕಷ್ಟವನ್ನು ದುಪ್ಪಟ್ಟು ಮಾಡಿದೆ.