ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದ್ದು ದೂರುದಾರ ಎಸ್.ಐ.ಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಮಂಗಳೂರು ಐಬಿ ನಲ್ಲಿ ಎಸ್ ಐಟಿ ಅಧಿಕಾರಿಗಳಿದ್ದು ಅಲ್ಲೇ ಎಸ್.ಐ.ಟಿ ತನಿಖೆಗಾಗಿ ಹಾಜಾರಾಗಿದ್ದಾರೆ. ಮುಸುಕು ಧರಿಸಿಕೊಂಡು ತನ್ನ ಇಬ್ಬರು ವಕೀಲರೊಂದಿಗೆ ಕಾರಿನಲ್ಲಿ ಬಂದ ದೂರುದಾರ ಸದ್ಯ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
ಇನ್ನು ನಿನ್ನೆ (ಜುಲೈ 25) ರಾತ್ರಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಎಸ್ ಐಟಿ ತಂಡದ ಅಧಿಕಾರಿ ಐಪಿಎಸ್ ಜಿತೇಂದ್ರ ಕುಮಾರ್ ದಯಾಮ ಪಿ.ಎಸ್.ಐ ಸಮರ್ಥ್ ರಿಂದ ದಾಖಲೆಗಳನ್ನು ಸಂಗ್ರಹಿಸಿದ್ದರು.
ಎಸ್.ಐ.ಟಿ ತಂಡದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಡಿಎಸ್ಪಿ ಲೋಕೇಶ್ , ಇನ್ಸ್ಪೆಕ್ಟರ್ ಮಂಜುನಾಥ್ ಹಾಗೂ ಇತರ ಇಬ್ಬರು ಸಿಬ್ಬಂದಿ ಧರ್ಮಸ್ಥಳ ಠಾಣೆಗೆ ಆಗಮಿಸಿ ಸುಮಾರು 2 ಗಂಟೆಗಳ ದಾಖಲೆ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಸಮರ್ಥ್ ಅವರಿಂದ ದಾಖಲೆಗಳನ್ನು ಪಡೆದುಕೊಂಡು ತೆರಳಿದ್ದರು.