ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಮತ್ತು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಪಶ್ಚಿಮ ಘಟ್ಟಗಳ ಸಾಲುಕೆರೆ ಕಟ್ಟೆ ನಮ್ಮೂರು ಭಾಗದಲ್ಲಿ ಇಡೀ ರಾತ್ರಿ ಸುರಿದ ಮಳೆಗೆ ತುಂಗಾ ನದಿಯ ಒಳಹರಿವಿನಲ್ಲಿ ಗಣನಿಯವಾಗಿ ಏರಿಕೆಯಾಗಿದ್ದು ಶೃಂಗೇರಿ ಪಟ್ಟಣದ ಗಾಂಧಿ ಮೈದಾನ ಪಾರ್ಕಿಂಗ್ ಫ್ಲಾಟ್ ಸಂಪೂರ್ಣವಾಗಿ ಜಲಾವೃತಗೊಂಡಿದ್ದು ತುಂಗಾ ನದಿಯ ತೀರಕ್ಕೆ ಪ್ರವಾಸಿಗರು, ಸ್ಥಳೀಯರು ತೆರಳದಂತೆ ಸೂಚನೆಯನ್ನು ನೀಡಲಾಗಿದೆ