ಚಿಕ್ಕಮಗಳೂರು: ಮಲೆನಾಡಿನಲ್ಲಿ ಭಾರೀ ಮಳೆಗೆ ಅನಾಹುತಾಗಳು ಮುಂದುವರೆದಿದ್ದು ಕಳಸ ತಾಲೂಕಿನಾದ್ಯಂತ ಭಾರಿ ಗಾಳಿ – ಮಳೆ ಹಿನ್ನೆಲೆಯಲ್ಲಿ ದನದ ಕೊಟ್ಟಿಗೆಯ ಶೀಟ್ ಗಳು ಹಾರಿಹೋಗಿದ್ದವು
ಜಿಲ್ಲೆಯ ಕಳಸ ತಾಲೂಕಿನ ಇಡಕಣಿ ಗ್ರಾಮದ ಸಿಡ್ಲಾರ್ ಮಕ್ಕಿಯಲ್ಲಿ ನಡೆದ ಘಟನೆಯಾಗಿದ್ದು ಗಾಳಿ ಮಳೆ ಹೊಡೆತಕ್ಕೆ ಪರಮೇಶ್ವರ ಹೆಬ್ಬಾರ್ ಅವರ ದನದ ಕೊಟ್ಟಿಗೆ ಸಂಪೂರ್ಣ ಜಖಂ ಆಗಿದ್ದು ಗಾಳಿಯ ರಭಸಕ್ಕೆ ದಿಕ್ಕಾಪಾಲಾಗಿ ಬಿದ್ದ ಶೀಟ್ ಗಳು
ರಾತಿ ಪೂರ್ತಿ ಮಳೆಯಲ್ಲೇ ನೆನೆದ ಹಸುಗಳು ಗಾಳಿ ಮಳೆ ಎಡೆಬಿಡೆದ ಬರುತ್ತಿದ್ದ ಹಿನ್ನೆಲೆಯಲ್ಲಿ ಅಸಾಯಕರಾಗಿ ನಿಂತ ಮನೆ ಮಂದಿಗಾಳಿ ರಭಸಕ್ಕೆ ಮನೆ ಮೇಲೆ ಹಾರಿ ಬಂದ ಶೀಟ್ ನಿಂದ ಮನೆಯ ಹೆಂಚಿಗೂ ಹಾನಿ ಉಂಟಾಗಿದೆ.
ಇಡಕಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರವೀಂದ್ರ ಮತ್ತು ಸದಸ್ಯೆ ಲತಾ ಅವರಿಂದ ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದಾರೆ.