ಚಿಕ್ಕಮಗಳೂರು :ಕಾಫಿನಾಡು ಮಲೆನಾಡಲ್ಲಿ ಮಳೆಗೆ ಮುಂದುವರಿದ ಅವಾಂತರಗಳ ಆಗಿದ್ದು ನಿರಂತರ ಧಾರಾಕಾರ ಮಳೆಗೆ ಶೃಂಗೇರಿ ನಗರ ಜನಜೀವನ ಅಸ್ತವ್ಯಸ್ತಗೊಂಡಿದೆ.
ಶೃಂಗೇರಿ ಜನಸಾಮಾನ್ಯರ ಜೊತೆ ಶಾರದಾಂಬೆ ಭಕ್ತರು ಕಂಗಾಲಾಗಿದ್ದು ತುಂಗಾ ನದಿಯ ಅಬ್ಬರಕ್ಕೆ ಪ್ರವಾಸಿಗರ ಕಾರುಗಳ ಮುಳುಗಡೆ ಹೊಂದಿದೆ. ಗಾಂಧಿ ಮೈದಾನದಲ್ಲಿ ನಿಂತಿದ್ದ ಪ್ರವಾಸಿ ಕಾರುಗಳು ಜಲಾವೃತಗೊಂಡಿವೆ.
ಶನಿವಾರ ಬೆಳಗ್ಗೆಯಿಂದಲೂ ಶೃಂಗೇರಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿಕ್ಷಣ-ಕ್ಷಣಕ್ಕೂ ಏರಿಕೆಯಾಗುತ್ತಿರುವ ತುಂಗಾ-ಭದ್ರಾ ನದಿಯ ನೀರಿನ ಮಟ್ಟ ಹಾಗೆ ತುಂಗಾ-ಭದ್ರಾ ನದಿಯ ಇಕ್ಕೆಲಗಳ ತೋಟಗಳು ಬಹುತೇಕ ಜಲಾವೃತಗೊಂಡಿದ್ದು ಮಲೆನಾಡ ನಿರಂತರ ಮಳೆಯಿಂದ ಆತಂಕದಲ್ಲಿರುವ ಜನರು.
ಶೃಂಗೇರಿ-ಕೊಪ್ಪ-ಮೂಡಿಗೆರೆ-ಕಳಸ-ಎನ್.ಆರ್.ಪುರದಲ್ಲಿ ಭಾರೀ ಗಾಳಿ-ಮಳೆ ಆಗಿದ್ದು ಅಲ್ಲಿ ಕೂಡ ತೋಟಕ್ಕೆಲ್ಲಾ ನೀರು ನುಗ್ಗಿ ಹಾನಿ ಉಂಟಾಗಿದೆ.