ಜಯಪುರ: ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ತೀರ್ಥಕೆರೆ ಬಳಿ ಬೃಹತ್ತಾಕಾರದ ಮರವೊಂದು ರಸ್ತೆಗೆ ಬಿದ್ದಿದ್ದು ಬೆಳಗ್ಗೆಯಿಂದ ಜಯಪುರದಿಂದ ಬಸರೀಕಟ್ಟೆ, ಕಳಸ, ಹೊರನಾಡಿಗೆ ಹಾಗೂ ಹೊರನಾಡಿನಿಂದ ಬಸರೀಕಟ್ಟೆ ಜಯಪುರಕ್ಕೆ ಬಸ್ ಸಂಪರ್ಕ ಇಲ್ಲದೆ ಜನ ಪರದಾಡುವಂತಾಗಿದೆ.
ಮರವನ್ನು ಇನ್ನೂ ತೆರವುಗೊಳಿಸದೆ ಇರುವುದರಿಂದ ಸಣ್ಣಪುಟ್ಟ ವಾಹನಗಳು ಓಡಾಡುತ್ತಿವೆ ಮರವನ್ನು ತೆರವುಗೊಳಿಸಿದ ನಂತರವಷ್ಟೇ ಬಸ್ಸುಗಳು ಈ ಮಾರ್ಗವಾಗಿ ಸಂಚರಿಸಬಹುದಾಗಿದೆ.
ಮಲೆನಾಡಿನಲ್ಲಿ ಗಾಳಿ ಮಳೆಗೆ ಹಲವೆಡೆ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ.
ವರದಿ: ಶಶಿ ಬೆತ್ತದಕೊಳಲು