ಜಯಪುರ: ಭಾರೀ ಗಾಳಿ ಮಳೆಗೆ ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೆಣಸಿನಹಾಡ್ಯದಲ್ಲಿ ಗಿರಿಜ ಎಂಬುವವರ ಮನೆಯ ಶೀಟ್ ಹಾಗೂ ಹಂಚುಗಳು ದಿಕ್ಕಪಾಲಾಗಿ ಬಿದ್ದಿವೆ.

ಹಂಚುಗಳು ಹಾರಿ ಹೋಗಿದ್ದರಿಂದ ಮನೆಯೊಳಗೆ ನೀರು ತುಂಬಿದ್ದು ಮನೆಯ ವಸ್ತುಗಳು ಹಾನಿಯಾಗಿದೆ.ರಾತ್ರಿ ಮನೆಯ ಹಂಚುಗಳು ಹಾರಿ ಹೋಗಿದ್ದರಿಂದ ನಿದ್ರೆಯಿಲ್ಲದೆ ಕುಟುಂಬ ಕಾಲ ಕಳೆದಿದೆ.

ಅತ್ತಿಕುಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಿಂದ ಸಹಕಾರ: ಇಂದು ಮುಂಜಾನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅತ್ತಿಕುಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೋಪಾಲಕೃಷ್ಣ ರವರು ಮನೆಗೆ ಬೇಕಾಗಿದ್ದ ಶೀಟು ಹಂಚುಗಳನ್ನು ನೀಡಿವುದರ ಮೂಲಕ ಬಡ ಕುಟುಂಬಕ್ಕೆ ನೆರವಾಗಿದ್ದಾರೆ.
ವರದಿ: ಶಶಿ ಬೆತ್ತದಕೊಳಲು