Sunday, August 3, 2025
!-- afp header code starts here -->
Homeಜಿಲ್ಲಾಸುದ್ದಿಭಾರೀ ಮಳೆಯಿಂದ ಶಿರಾಡಿ ಘಾಟ್‌ನಲ್ಲಿ ಉರುಳಿದ ಮರ: ಲಘು ಭೂಕುಸಿತ

ಭಾರೀ ಮಳೆಯಿಂದ ಶಿರಾಡಿ ಘಾಟ್‌ನಲ್ಲಿ ಉರುಳಿದ ಮರ: ಲಘು ಭೂಕುಸಿತ

ಸಕಲೇಶಪುರ: ತಾಲೂಕಿನಲ್ಲಿ ಮಳೆಗಿಂತ ಗಾಳಿಯ ಆರ್ಭಟ ಜೋರಾಗಿದ್ದು ಮಳೆಗಾಳಿಯಿಂದ ಹಲವಾರು ಮರಗಳು ಧರೆಶಾಯಿಯಾಗಿದೆ.
ಶ್ರಾವಣದ ಆರಂಭದಲ್ಲೆ ಮಳೆ ಭರ್ಜರಿಯಾಗಿ ಸುರಿಯುತ್ತಿದ್ದು ಮಳೆ ಹಿನ್ನೆಲೆಯಲ್ಲಿ ಶನಿವಾರ ತಾಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ನೀಡಲಾಗಿತ್ತು. ಭಾನುವಾರ ಎಂದಿನಂತೆ ರಜಾ ಇದ್ದು ಇದರಿಂದ ಮಕ್ಕಳು ಮನೆಗಳಲ್ಲೆ ನೆಮ್ಮದಿಯಾಗಿ ಕಾಲ ಕಳೆದರು.


ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್‌ನಲ್ಲಿ ಉರುಳಿದ ಮರ ಹಾಗೂ ಲಘು ಭೂಕುಸಿತ: ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75 ಮಾರನಹಳ್ಳಿುಂದ ಮುಂದೆ ಮರವೊಂದು ಉರುಳಿ ಬಿದ್ದ ಪರಿಣಾಮ ಲಘು ಭೂಕುಸಿತ ಸಂಭವಿಸಿತ್ತು. ಇದರಿಂದ ಕೆಲಕಾಲ ಸಂಚಾರದಲ್ಲಿ ಅಡಚಣೆಯುಂಟಾಗಿತ್ತು. ನಂತರ ಹೆದ್ದಾರಿ ಸಿಬ್ಬಂದಿಗಳು ಬಿದ್ದ ಮಣ್ಣು ಹಾಗೂ ಮರವನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿವಿಧೆಡೆ ಬಿದ್ದ ಮರಗಳು: ಭಾರಿ ಗಾಳಿುಂದಾಗಿ ತಾಲೂಕಿನ ವಿವಿಧ ರಾಜ್ಯ ಹೆದ್ದಾರಿಗಳು ಹಾಗೂ ಜಿ.ಪಂ ರಸ್ತೆಗಳಲ್ಲಿ ಮರಗಳು ಬಿದ್ದಿದ್ದು ಹಲವೆಡೆ ಮರದ ರೆಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸಕಲೇಶಪುರ-ಹಾನುಬಾಳ್-ಮೂಡಿಗೆರೆ ರಾಜ್ಯ ಹೆದ್ದಾರಿ ಅಗಲಟ್ಟಿ, ವೆಂಕಟಹಳ್ಳಿ,ರಕ್ಷಿದಿ ಸಮೀಪ ರಸ್ತೆ ಬದಿ ಗಾಳಿುಂದ ಬಿದ್ದಿದ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದರು. ಕಡಗರಹಳ್ಳಿುದ ಹಿರದನಹಳ್ಳಿ ರಸ್ತೆಯ ಮೇಲೆ ಬಿದ್ದಿದ್ದ ಬಾರಿ ಮರವೊಂದು ಬಿದ್ದು ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿದರು.


ಅತಿಯಾದ ಗಾಳಿ ಮಳೆಯಿಂದ ಮನೆಯ ಮೇಲೆ ಬಿದ್ದ ಬೃಹತ್ ಗಾತ್ರದ ಮರ ಮನೆ ಸಂಪೂರ್ಣ ಜಖಂ: ಕಳೆದ ಐದು ದಿನಗಳಿಂದ ಮಲೆನಾಡು ಭಾಗವಾದ ತಾಲೂಕಿನಾದ್ಯಂತ ಸುರಿಯುತ್ತಿರುವ ಅತಿಯಾದ ಪುಷ್ಯ ಮಳೆ ಗಾಳಿುಂದಾಗಿ ತಾಲೂಕಿನ ಮಾರನಹಳ್ಳಿ ಗ್ರಾಮದ ಜಿ.ಟಿ. ರುಕ್ಮಿಣಿ ಎಂಬುವವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಮನೆಯು ಸಂಪೂರ್ಣ ಜಖಂಗೊಂಡಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಮನೆಯ ಮಾಲೀಕರಾದ . ಜಿ.ಟಿ. ರುಕ್ಮಿಣಿ ಮನವಿ ಮಾಡಿದ್ದಾರೆ.

ಗಾಳಿಯ ಆಭರ್ಟ ಜೋರು: ತಾಲೂಕಿನ ಹೆತ್ತೂರು, ಹಾನುಬಾಳ್ ಹೋಬಳಿಗಳಲ್ಲಿ ಭಾರಿ ಗಾಳಿ ಬೀಸುತ್ತಿದ್ದು ಜನ ಮನೆಗಳಿಂದ ಹೊರಗೆ ಬರಲು ಅಂಜಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ವೈರ್‌ಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವು ಗ್ರಾಮಾಂತರ ಪ್ರದೇಶಗಳು ಕತ್ತಲಿನಲ್ಲಿ ಮುಳುಗಿದೆ.


27ಎಸ್.ಕೆ.ಪಿ.ಪಿ 1 ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ಶಿರಾಡಿ ಘಾಟ್ ನಲ್ಲಿ ಲಘು ಭೂಕುಸಿತವಾಗಿರುವುದು.
27ಎಸ್.ಕೆ.ಪಿ.ಪಿ 1-1 ಸಕಲೇಶಪುರ ತಾಲೂಕಿನ ಮಾರನಹಳ್ಳಿಯ ರುಕ್ಮಿಣಿ ಎಂಬುವರ ಮನೆಗೆ ಹಾನಿಯಾಗಿರುವುದು.
27ಎಸ್.ಕೆ.ಪಿ.ಪಿ 1-2 ಸಕಲೇಶಪುರ ತಾಲೂಕಿನ ಕಡಗರಹಳ್ಳಿ ಹಿರಿದನಹಳ್ಳಿ ರಸ್ತೆ ಮಧ್ಯೆ ಬಿದ್ದಿರುವ ಭಾರಿ ಮರ
27ಎಸ್.ಕೆ.ಪಿ.ಪಿ 1-4 ಸಕಲೇಶಪುರ ತಾಲೂಕಿನ ವೆಂಕಟಹಳ್ಳಿ ಗ್ರಾಮದಲ್ಲಿ ಬಿದ್ದ ಭಾರಿ ಮರವೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ತೆರವುಗೊಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!