ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳ ಅಂತರದಲ್ಲಿ ಆನೆ ದಾಳಿಗೆ ಇಬ್ಬರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರು- ಖಾಂಡ್ಯ ಬಂದ್ ನಾಗರೀಕ ಹಿತರಕ್ಷಣಾ ವೇದಿಕೆ, ರಾಜಕೀಯ ಪಕ್ಷಗಳು, ಹಾಗೂ ಸ್ಥಳೀಯರು ಸ್ವಯಂ ಪ್ರೇರಿತರಾಗಿ ಬಂದ್ʼಗೆ ಕರೆ ನೀಡಿದ್ದಾರೆ.
ನಿಮ್ಮ ಪರಿಹಾರ ಬೇಡ ನಮ್ಮ ಜೀವ ಉಳಿಸಿ ಎಂಬ ಘೋಷಣೆಯೊಂದಿಗೆ ಬಾಳೆಹೊನ್ನೂರು ಬಂದ್ʼಗೆ ಕರೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಾಳೆಹೊನ್ನೂರು- ಖಾಂಡ್ಯ ಹೋಬಳಿಯ ಸ್ಥಳೀಯ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬಾಳೆಹೊನ್ನೂರು ಜೊತೆ ಖಾಂಡ್ಯ ಹೋಬಳಿಯ ಮೂರು ಗ್ರಾಮಪಂಚಾಯತಿಗಳು ಬಂದ್ʼಗೆ ಬೆಂಬಲಕ್ಕೆ ಸಹಕಾರ ನೀಡಿದ್ದು. ಬಾಳೆಹೊನ್ನೂರಿನಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
ಬನ್ನೂರು ಬಳಿ 25 ವರ್ಷದ ಕೂಲಿ ಕಾರ್ಮಿಕ ಮಹಿಳೆ ಅನಿತಾ ಎಂಬುವರನ್ನ ಆನೆ ಸಾಯಿಸಿತ್ತು. ಕಳೆದ ರಾತ್ರಿ 65 ವರ್ಷದ ಕೃಷಿಕ ಸುಬ್ಬೆಗೌಡ ಎಂಬುವರನ್ನ ಕೂಡ ಆನೆ ತುಳಿದು ಸಾಯಿಸಿದೆ. 4 ದಿನದ ಅಂತರದಲ್ಲಿ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕಾಫಿನಾಡಿನ ಮಲೆನಾಡಿಗರು ರಾಜ್ಯ ಸರ್ಕಾರ ಹಾಗೂ ಅರಣ್ಯ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗೆ ಸ್ಥಳಕ್ಕೆ ಅರಣ್ಯ ಸಚಿವರು ಬರುವಂತೆ ಸ್ಥಳೀಯರು ಪಟ್ಟುಹಿಡಿದಿದ್ದಾರೆ. ಅಲ್ಲಿಯವರೆಗೂ ನಾವು ಮೃತದೇಹವನ್ನು ಎತ್ತಕ್ಕೆ ಬಿಡಲ್ಲವೆಂದು ಗ್ರಾಮಸ್ಥಸ್ರು, ಸ್ಥಳಿಯರು ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.