ಮೂಡಿಗೆರೆ: ಶಾಲಾ ಕಾಲೇಜು ಹಾಗೂ ಎಲ್ಲಾ ಕಚೇರಿಗಳು, ಅಂಗಡಿಗಳಲ್ಲಿ ಕನ್ನಡ ನಾಮ ಫಲಕ ಅಳವಡಿಸಲು ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ಘಟಕದ ವತಿಯಿಂದ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಚಂದ್ರು ಒಡೆಯರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯಕ್ಕೆ ಪರಭಾಷಿಕರ ಹಾವಳಿ ಹೆಚ್ಚುತ್ತಿದ್ದು ಇದನ್ನು ಖಂಡಿಸುತ್ತೆವೆ. ಕೆಲ ಸಂಸ್ಥೆಗಳಲ್ಲಿ ಕನ್ನಡ ಭಾಷೆ ಬಾರದವರನ್ನು ನೇಮಿಸಿದ್ದು ಅನೇಕ ಸಂಘರ್ಷಗಳಿಗೆ ಕಾರಣವಾಗಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಗಮನಿಸಬೇಕು.
ಕೆಲ ಕಚೇರಿ, ಶಾಲಾ, ಕಾಲೇಜು,ಅಂಗಡಿಗಳಲ್ಲಿ ಕನ್ನಡ ನಾಮ ಫಲಕ ಅಳವಡಿಸದೆ ಕನ್ನಡಕ್ಕೆ ಅವಮಾನ ತೋರುತ್ತಿದ್ದೂ ಖಂಡನೀಯ ಎಂದರು. ಹಾಗೆ ಕರ್ನಾಟಕದಲ್ಲಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಮೊದಲು ಪ್ರಾಧನ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ಘಟಕದ ಸದಸ್ಯರು ಇದ್ದರು