ಮೂಡಿಗೆರೆ: ಸರ್ಪಗಳು ಮತ್ತು ಹಾವುಗಳನ್ನು ಪೂಜಿಸಿ ನಾಗರಕಟ್ಟೆಗೆ ಹಾಲೆರೆದು ಆಚರಿಸಲ್ಪಡುವ ಹಿಂದೂ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿ ಹಬ್ಬವನ್ನು ಸಡಗರ ಸಂಭ್ರಮ ಭಕ್ತಿ ಪೂರ್ವಕವಾಗಿ ಆಚರಸಲಾಯಿತು.

ವೇಣುಗೋಪಾಲಸ್ವಾಮಿ ದೇವಾಲಯದ ಅರ್ಚಕರಾದ ಮಹಾಬಲ ಭಟ್ ಮಾತನಾಡಿ, ಈ ಶುಭ ದಿನವೂ ಸಾಂಪ್ರದಾಯಿಕ ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ತಿಂಗಳು ಹಿಂದೂ ಸಮುದಾಯದಿಂದ ಅತ್ಯಂತ ಪವಿತ್ರವೆಂದು ಭಾವಿಸಲಾಗಿದೆ. ವಿಶೇಷವಾಗಿ ಸರ್ಪಗಳ ದೇವರು ಅಥವಾ ನಾಗ ದೇವತೆಯನ್ನು ಪೂಜಿಸುವ ವಿಶೇಷ ದಿನ ಎಂದು ತಿಳಿಸಿದರು. ಸಕಲರಿಗೂ ಭಗವಂತ ಆಶೀರ್ವದಿಸಲಿ ಕಷ್ಟ ಕಾರ್ಪಣ್ಯ ದೂರಾಗಲಿ ಎಂದು ಪ್ರಾರ್ಥಿಸಿ ಪೂಜಿಸಿದರು.

ತಾಲೂಕಿನ ಸುತ್ತ ಮುತ್ತದ ಗ್ರಾಮಗಳಲ್ಲಿ ಮಹಿಳೆಯರು ನಾಗರ ಕಟ್ಟೆಗೆ ಹಾಲು ಅರ್ಪಿಸಿ ನಾಗ ದೇವತೆಯನ್ನು ಪೂಜಿಸಿ ತಮ್ಮ ಕುಟುಂಬಗಳಿಗೆ, ವಿಶೇಷವಾಗಿ ತಮ್ಮ ಸಹೋದರರಿಗೆ ಆರೋಗ್ಯಕರ ಮತ್ತು ದೀರ್ಘಾಯುಷ್ಯಕ್ಕಾಗಿ ದೇವರು ಆಶೀರ್ವಾದವನ್ನು ನೀಡುವಂತೆ ಭಗವಂತನಲ್ಲಿ ಭಕ್ತಿಯಿಂದ ನಾಗರ ಕಟ್ಟೆಗೆ ಪ್ರದಕ್ಷಿಣೆ ಹಾಕಿ ಬೇಡಿಕೊಂಡರು..