ಚಿಕ್ಕಮಗಳೂರು: ಜಿಲ್ಲಾ ಶಿಕ್ಷಣ ಅಧಿಕಾರಿ ಜಿ.ಕೆ.ಪುಟ್ಟರಾಜು ಕಡ್ಡಾಯ ರಜೆ ಮೇಲೆ ತೆರಳಲು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮವಾರ ಆದೇಶ ನೀಡಿದ್ದಾರೆ.

ಆದರೆ ಪುಟ್ಟರಾಜು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ಸಂಬಂಧಿ ಎಂದು ಹೇಳಿಕೊಂಡು ಜಿಲ್ಲೆಯ ಶಾಸಕರೊಬ್ಬರಿಗೆ ನೈವೇದ್ಯ ಅರ್ಪಿಸಿ ತಾನೇ ರಜೆ ಹಾಕಿ ಹೋಗುತ್ತೇನೆ ಎಂದು ಮೀಸೆ ತಿರುವಿಕೊಳ್ಳುತ್ತಿದ್ದಾನೆ .
ಪುಟ್ಟರಾಜು ಜಿಲ್ಲೆಗೆ ಬಂದಾಗಿನಿಂದ ಎತ್ತುವಳಿಯಲ್ಲಿ ಎಕ್ಸ್ ಫರ್ಟ್ ಶಿಕ್ಷಣ ಇಲಾಖೆಯನ್ನು ಕುಲಗೆಡಿಸಿ ಜೇಬು ತುಂಬಿಸಿಕೊಂಡವನ ಬಗ್ಗೆ ಪ್ರತಿ ಕೆ.ಡಿ.ಪಿ ಸಭೆಯಲ್ಲಿ ಚರ್ಚೆ ಆಗುತಿತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕಠಾರಿಯ ಕಡ್ಡಾಯ ರಜೆ ಮೇಲೆ ಕಳುಹಿಸಲು ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಸಿ.ಇ.ಒ ನಿನ್ನೆ ಮಧ್ಯಾಹ್ನ ಕಡ್ಡಾಯ ರಜೆ ಮೇಲೆ ತೆರಳಲು ಆದೇಶ ನಿಡಿದ್ದರು .
ಆದರೆ ಹಣ ಬಲ ಮತ್ತು ಅಧಿಕಾರ ಬಲದಿಂದ ಕಡ್ಡಾಯ ರಜೆಯಲ್ಲಿ ತೆರಳದೆ ನಾನೇ ರಜಾ ಹಾಕುತ್ತೇನೆ ಎಂದು ಹೇಳುತ್ತಿದ್ದಾನೆ ಎಂದು ತಿಳಿದು ಬಂದಿದೆ.