ಹಾಸನ: ಜಿಲ್ಲಯಲ್ಲಿ ಮತ್ತೆ ಕಾಡಾನೆಗಳ ಉಪಟಳ ಜಾಸ್ತಿಯಾಗಿದ್ದು ರಾತ್ರೋ ರಾತ್ರಿ ಮನೆ ಮುಂದೆ ನಿಂತ ಒಂಟಿಸಲಗನ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಮನೆ ಮುಂದೆ ಬಂದು ನಿಂತಿದ್ದು ಸಿಸಿಟಿವಿ ದೃಶ್ಯ ಸೆರೆಯಾಗಿದ್ದು ಇದನ್ನು ಕಂಡ ಮನೆಮಂದಿ ಶಾಕ್ ಆಗಿದ್ದಾರೆ.
ಹೌದು .. ಸಕಲೇಶಪುರ ತಾಲೂಕಿನ ಶಾಂತಪುರ ಗ್ರಾಮದಲ್ಲಿರುವ ರಾಜಯ್ಯ ಎಂಬುವರ ಮನೆ ಮುಂದೆ ಬಂದು ನಿಂತಿದ್ದು, ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ. ಎಷ್ಟು ಸಲ ಅರಣ್ಯಾಧಿಕಾರಿಗಳಿಗೆ ಕಾಲ್ ಮಾಡಿದರೂ ರಿಸಿವ್ ಮಾಡಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೆಷ್ಟು ಪ್ರಾಣ ಹಾನಿ ಆಗಬೇಕು ಎಂದು ಅರಣ್ಯ ಇಲಾಖೆ ಕಾಯುತಿದ್ದರೋ ಗೊತ್ತಿಲ್ಲ.
ಒಂಟಿ ಮನೆಗಳಿಗೆ ಕಳ್ಳರಿಂದ ಒಂದು ಕಡೆ ಭಯವಾದರೆ ಇನ್ನೊಂದು ಕಡೆ ಆನೆಗಳಿಂದ ಮಲೆನಾಡಿನ ಜನರಿಗೆ ಇದು ಒಂದು ಶಾಪವಾಗಿ ಬಿಟ್ಟಿದೆ ಹಾಗೆ ನೀವು ಕೊಡುವ ಪುಡಿ ಪರಿಹಾರ ಹಣಕ್ಕೆ ಯಾರು ಸಾಯಲು ಸಿದ್ದರಿಲ್ಲ ಎಂದು ಕಿಡಿಕಾರಿದ್ದಾರೆ.