ಮೂಡಿಗೆರೆ: ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ಭಾಷಣಕ್ಕೆ ಹಿಂದೂ ಕಾರ್ಯಕರ್ತರ ದಿಲ್ ಫುಲ್ ಖುಷ್ ಆಗಿದ್ದು ಹಾಗೆ ರಾಜಕೀಯ ಬದಿಗಿಟ್ಟು, ಓರ್ವ ಹಿಂದೂವಾಗಿ ತ್ಯಾಗ ಮತ್ತು ಹಿಂದುತ್ವದ ಸಂಕೇತವಾದ ಕೇಸರಿ ಶಲ್ಯ ಧರಿಸಿದ್ದನ್ನು ನಾವು ಕಾಣಬಹುದು.
ಮೂಡಿಗೆರೆ ಪಟ್ಟಣದಲ್ಲಿ ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಶಾಸಕಿ ಭಾಗಿಯಾಗಿದ್ದರು. ಈ ವೇಳೆ, ನಾನು ಕಾಂಗ್ರೆಸ್ಸಿನಲ್ಲೇ ಇರುತ್ತೇನೋ? ಬಿಜೆಪಿಗೆ ಹೋಗ್ತೀನೋ? ಅಥವಾ ಬಿಎಸ್‌ಪಿ- ಎಸ್‌ಡಿಪಿಐಗೆ ಹೋಗ್ತೀನೋ ಎನ್ನುವ ಪ್ರಶ್ನೆಗೆ ಮೂರು ವರ್ಷ ಕಾಯೋಣ. ಆಮೇಲೆ ನೋಡೋಣ ಎಂದು ಹೇಳಿದ್ದಾರೆ.
ಹಾಗೆ ರಾಜಕೀಯ ಬದಿಗಿಟ್ಟು, ಓರ್ವ ಹಿಂದೂ ವಾಗಿ ತ್ಯಾಗದ ಮತ್ತು ಹಿಂದುತ್ವದ ಸಂಕೇತವಾದ ಕೇಸರಿ ಶಲ್ಯ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಿಂಧೂತ್ವದ ಹೃದಯ ಸಾಮ್ರಾಟ್ ಪ್ರಮೋದ್ ಮುತಾಲೀಕ್ ಅವರ ಮೆಚ್ಚುಗೆಗೆ ಪಾತ್ರರಾಗಿದಲ್ಲದೆ ಇಡಿ ತಾಲ್ಲೂಕಿನ ಮತ್ತು ರಾಜ್ಯದ ಹಿಂದೂ ಕಾರ್ಯಕರ್ತರಿಗೆ ಸಂತೋಷವಾಗಿದೆ.
ರಾಜಕೀಯ ಪಕ್ಷ ಕಾಂಗ್ರೆಸ್ ಶಾಸಕಿ ಆಗಿದ್ದರು ತಮ್ಮ ಧರ್ಮ ನಿಷ್ಠೆ ಮೆಚ್ಚುವಂತದ್ದು ನಿಜಕ್ಕೂ ನಯನ ಜನಪ್ರಿಯ ಶಾಸಕರೇ ಎಂಬುದು ಸತ್ಯ, . ರಾಜಕೀಯ ಪಕ್ಷಗಳಲ್ಲಿ ಪರ – ವಿರೋಧ ಸಹಜ, ದೇಶ ಧರ್ಮ ಬಂದಾಗ ನಮ್ಮ ಧರ್ಮವನ್ನು ಗೌರವಿಸುವ ನಿಟ್ಟಿನಲ್ಲಿ ರಾಜಕೀಯ ವಲಯದಲ್ಲಿ ಶ್ರೀಮತಿ ನಯನ ಮೋಟಮ್ಮ ಮಾದರಿ,ಮತಕ್ಕಾಗಿ ಅನ್ಯ ಧರ್ಮಿಯಾರನ್ನು ಮೆಚ್ಚಿಸುವ ಕೆಲಸ ಮಾಡುವ ರಾಜಕಾರಿಣಿಗಳೆ ಹೆಚ್ಚಿರುವಾಗ ಶ್ರೀಮತಿ ನಯನ ಮೋಟಮ್ಮ ಅವರ ನಡೆ ಸ್ವಾಗತರ್ಹ ಎನ್ನಬಹುದು. ನಾನೊಬ್ಬಳು ಹಿಂದೂ. ಆಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾದ್ದೇನೆ ಅಂದಾಗ ನಿಜಕ್ಕೂ ಹೆಮ್ಮೆ ಎಂದು ಹೇಳಿದ್ದರು ಈ ವೇಳೆ ಶಬ್ಬಾಸ್ ಶಾಸಕಿ ನಯನ ಮೋಟಮ್ಮನವರೇ ಅಂತಾರೆ ಹಿಂದೂ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ವರದಿ : ಪುನೀತ್ ಕಡಿದಾಳ್