ಹಾಸನ: ವೈದ್ಯರು ಹಾಗೂ ಆಂಬುಲೆನ್ಸ್ ಚಾಲಕರಿಲ್ಲದ ಸಾರ್ವಜನಿಕರಿಗೆ ತೊಂದರೇ ಆಗುತ್ತಿದ್ದೂ ಕೂಡಲೇ ಚಾಲಕರ ನೇಮಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ಘಟಕ ಸದಸ್ಯರು ಒತ್ತಾಯಿಸದ್ದಾರೆ
ಈ ಕುರಿತು ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷ ಗಗನ್ ಮಾತನಾಡಿ, ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ಅವ್ಯವಸ್ಥೆ ಕುರಿತಾಗಿ ಸಾರ್ವಜನಿಕರು ಹೊರಹಾಕಿದ್ದು, ಸಾರ್ವಜನಿಕರ ಹಿತ ಕಾಪಾಡಬೇಕಾದ ಅರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನ ನಿಜಕ್ಕೂ ನಾಚಿಕೆಗೆಡು, ಹೆತ್ತೂರು ಹೋಬಳಿಯ ಏಕೈಕ ಸರ್ಕಾರಿ ಆಸ್ಪತ್ರೆಯಿಂದ 108 ಆಂಬುಲೆನ್ಸ್ ಅನ್ನು ಅಸ್ಪಷ್ಟ ಕಾರಣಗಳಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು ಇದರಿಂದ ಗ್ರಾಮೀಣ ಪ್ರದೇಶದ ಹಲವಾರು ಜನರಿಗೆ ತೀವ್ರ ತೊಂದರೆ ಉಂಟಾಗಿದೆ ಆಂಬುಲೆನ್ಸ್ ಚಾಲಕರ ಹಾಗೂ ವೈದ್ಯರ ಕೊರತೆಯನ್ನು ಗಮನದಲ್ಲಿಟ್ಟು ಕೂಡಲೇಕೊರತೆ ನಿಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕಿನಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು,
ಆಂಬುಲೆನ್ಸ್ ಒದಗಿಸಿದ್ದರು ಚಾಲಕರಿಲ್ಲ, ಕಳೆದೆರೆಡು ದಿನಗಳ ಹಿಂದೆ ಅಪಘಾತಕ್ಕೆ ಒಳಪಟ್ಟ ವ್ಯಕ್ತಿಯೊಬ್ಬರು ಜೀವನ್ಮರಣ ನಡುವೆ ಹೋರಾಟ ನಡೆಸಿದ್ದು ನಮ್ಮ ಗಮನಕ್ಕೆ ಬಂದಿದ್ದು,ಆಂಬುಲೆನ್ಸ್ ಆಸ್ಪತ್ರೆಯ ಆವರಣದಲ್ಲಿ ಇದ್ದರೂ, ಚಾಲಕರಿಲ್ಲದ ಕಾರಣ ಸಾರ್ವಜನಿಕರು ಸ್ವತಃ ಸ್ವಂತ ವಾಹನದಲ್ಲಿ ಅಪಘಾತಕ್ಕಿಡಾದ ವ್ಯಕ್ತಿಯನ್ನು ಕರೆತಂದು ಚಿಕಿತ್ಸೆ ನೀಡಿಸಲಾಗಿದೆ. ಸಾರ್ವಜನಿಕರ ಬಳಕೆಗೆ ಬಾರದ ಸುಸಜ್ಜಿತ ಆಂಬುಲೆನ್ಸ್ ಇದ್ದು ಚಾಲಕರ ಕೊರತೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ದಾಖಲೆ ಎಂದರು
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜವಾಬ್ದಾರಿಯುತರು. ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಇದ್ದರು