ಚಿಕ್ಕಮಗಳೂರು: ಮಲೆನಾಡು ಭಾಗವಾದ ಮೂಡಿಗೆರೆ ತಾಲೂಕಿನಲ್ಲಿ ಮಳೆ ಆರ್ಭಟ ಜೋರಾಗಿದ್ದು ದಿನಕ್ಕೊಂದು ಅವಾಂತರಗಳು ಸೃಷ್ಟಿಯಾಗುತ್ತಲೇ ಇದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಆಟೋ ಒಂದು ಪಲ್ಟಿಯಾಗಿರುವ ಘಟನೆ ಮೂಡಿಗೆರೆ ತಾಳುಕಿನ ಹೆಬ್ರಿ ಗ್ರಾಮದ ಬಳಿ ನಡೆದಿದೆ.
ಚಂದುವಳ್ಳಿ ಕಡೆಯಿಂದ ಬಣಕಲ್ ಕಡೆಗೆ ತೆರಳುತ್ತಿದ್ದ ಆಟೋಗೆ ನಾಯಿ ಅಡ್ಡ ಬಂದ ತಕ್ಷಣ ಚಾಲಕ ಬ್ರೇಕ್ ಹಾಕಿದ ಕೂಡಲೇ ನಿಯಂತ್ರಣ ತಪ್ಪಿ ಆಟೋ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಆಟೋ ಚಾಲಕ ಹಾಗೂ ಪ್ರಯಾಣಿಕರು ಸೇಫ್ ಆಗಿದ್ದಾರೆ.
ಹೀಗಾಗಿ ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಹಾಗೂ ಆಟೋ ಚಾಲಕರು ನಿಧಾನವಾಗಿ ಗಾಡಿ ಓಡಿಸುವುದು ಒಳ್ಳೆಯದು.