ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಮದಗದ ಕೆರೆಯಲ್ಲಿ ಚಿರತೆ ಮೃತದೇಹ ತೇಲುವ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಗುರುವಾರ ಬೆಳಿಗ್ಗೆ ಸಖರಾಯಪಟ್ಟಣದ ಸಮೀಪದ ಎಮ್ಮೆದೊಡ್ಡಿ ಬಳಿ ಸ್ಥಳೀಯರಾದ ಮೂರ್ತಿ ಮತ್ತು ರಾಜಣ್ಣ ಎನ್ನುವರ ಮೇಲೆ ಚಿರತೆಯೊಂದು ದಾಳಿ ಮಾಡಿತ್ತು. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ದಾಳಿ ಮಾಡುವಾಗ ಜನರೆಲ್ಲಾ ರೊಚ್ಚಿಗೆದ್ದು ಕಲ್ಲಿನಿಂದ ಹೊಡೆದು ಜಜ್ಜಿ ಹಾಕಲು ನೋಡಿದ್ದರು ದಾಳಿ ನಂತರ ಚಿರತೆ ಅಲ್ಲಿಯೇ ಪೊದೆಯಲ್ಲಿ ಇತ್ತು ಎನ್ನಲಾಗಿದೆ. ಇದನ್ನು ಗಮನಿಸಿದ ಕೆಲವರು ಿದು ಅಟ್ಯಾಕ್ ಮಾಡಿದ ಚಿರತೆಯೋ ಅಥವಾ ಬೇರೆ ಚಿರತೆಯೋ ಎಂದು ತಿಳಿಯಬೇಕಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ಮಾಡುವಾಗ ಚಿರತೆ ತಲೆಯ ಮೇಲೆ ಗಾಯವಾಗಿದ್ದು, ದೇಹದ ಮೇಲೆ ಹಲವಾರು ಕಡೆ ಹಲ್ಲೆ ಆಗಿರುವ ಕುರುಹುಗಳು ಪತ್ತೆಯಾಗಿವೆ.
ಸ್ಥಳೀಯರ ಪ್ರಕಾರ ವಾಹನ ಡಿಕ್ಕಿ ಹೊಡೆದು ಚಿರತೆ ನಿತ್ರಾಣಗೊಂಡು ಅಲ್ಲೇ ಇತ್ತು ಮತ್ತು ಸ್ಥಳೀಯ ದಾರಿ ಹೋಕರ ಮೇಲೆ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಹೊಡೆದು ಕೊಂದು ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.