ಹಾಸನ: ಅತ್ಯಾಚಾರ ಮತ್ತು ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ತಮ್ಮ ಪುತ್ರ ಮತ್ತು ಮಾಜಿ ಸಂಸದ ಪ್ರಜ್ವಲ್ ದೋಷಿ ಎಂದು ತೀರ್ಪು ನೀಡಿದ ವಿಶೇಷ ಜನ ಪ್ರತಿನಿಧಿಗಳ ಕೋರ್ಟ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಮಾಜಿ ಸಚಿವ ಮತ್ತು ಹೊಳೆನರಸಿಪುರ ಶಾಸಕ ಎಚ್.ಡಿ. ರೇವಣ್ಣ ನಿರಾಕರಿಸಿದ್ದಾರೆ.
ಮಾಧ್ಯಮದವರು ಎಷ್ಟೇ ಸತಾಯಿಸಿದರು ಪ್ರಶ್ನೆ ಕೇಳಿದರು ರೇವಣ್ಣ ಮಾತ್ರ ಯಾವುದಕ್ಕೂ ತುಟಿಕ್ ಪಿಟಿಕ್ ಅನ್ನದೇ ಬದಲಿಗೆ ಅತ್ತ ಇತ್ತ ನೋಡುತ್ತಾ ಮೌನವಾಗಿ ಹೆಜ್ಜೆ ಹಾಕುತ್ತಾ ಕಾರನ್ನು ಹತ್ತಿ ಹೊರಟು ಹೋದರು.