ಚಿಕ್ಕಮಗಳೂರು: ಕಾಫಿ ತೋಟಗಳಿಗೆ ಕಾಡಾನೆ ದಾಳಿ ಮಾಡಿ ನೂರಾರು ಕಾಫಿ, ಅಡಿಕೆ ನಾಶ ಮಾಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಮರಿತೊಟ್ಲು ಗ್ರಾಮದಲ್ಲಿ ನಡೆದಿದೆ.

ಮರಿತೊಟ್ಲು ಗ್ರಾಮದ ಹುಲುಗಾರು ಲಕ್ಷಣ್ ಎಂಬುವವರ ತೋಟದಲ್ಲಿ ಒಂದು ವಾರದಿಂದ ಬೀಡುಬಿಟ್ಟಿರುವ ಕಾಡಾನೆ ಸುಮಾರು ನೂರಾರು ಕಾಫಿ ಹಾಗೂ ಅಡಿಕೆ ಗಿಡ ನಾಶ ಮಾಡಿದೆ. ಈ ಹಿಂದೆ ಕುಂಚೂರು ಸುತ್ತಮುತ್ತ ಹಾನಿ ಮಾಡಿ ನಂತರ ಇಲ್ಲಿಗೆ ಬಂದು ಬೀಡುಬಿಟ್ಟಿದ್ದಾವೆ.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಬೇಕು ಹಾಗೂ ಆನೆ ಸ್ಥಳಾಂತರ ಮಾಡಬೇಕು ಎಂದ ಸ್ಥಳೀಯರು ಒತ್ತಾಯ ಮಾಡಿದ್ದಾರೆ. ತಪ್ಪಿದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.