ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಪಟ್ಟಣದ ಪ್ರಮುಖ ರಸ್ತೆ ಕಡೂರು -ಮಂಗಳೂರು ಮಾರ್ಗದ ರಸ್ತೆಯಲ್ಲಿ ಅಧಿಕ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿದ್ದು ಸರಿಪಡಿಸುವಂತೆ ಆಂಬುಲೆನ್ಸ್ ಚಾಲಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೂಡಿಗೆರೆಯ ಕೆ.ಎಂ ರಸ್ತೆಯಲ್ಲಿ ಅಧಿಕವಾಗಿ ಗುಂಡಿಗಳು ಬಿದ್ದಿದ್ದು ಆಂಬುಲೆನ್ಸ್ ಚಾಲಕರು ಹಾಗೂ ವಾಹನ ಸವಾರರು ಪ್ರತಿ ದಿನ ಹಿಡಿ ಶಾಪ ಹಾಕುತ್ತ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಕುರಿತು ಆಂಬುಲೆನ್ಸ್ ಚಾಲಕ ರಾಘು ಹಂಡಗುಳಿ ಮಾತನಾಡಿ, ಜೀವನ ಉಳಿಸುವ ಬರದಲ್ಲಿ ಚಾಲಕರು ಅತಿವೇಗವಾಗಿ ಆಂಬುಲೆನ್ಸ್ ಚಾಲನೆ ಮಾಡಬೇಕು. ತುರ್ತು ಪರಿಸ್ಥಿತಿ ಇದ್ದಾಗ ಜೀವ ಉಳಿಸುವ ಯೋಚನೆಯಲ್ಲಿ ನಾವಿರುತ್ತೇವೆ ಈ ನಿಟ್ಟಿನಲ್ಲಿ ರಸ್ತೆಗಳ ಗುಣಮಟ್ಟ ಪ್ರಮುಖವಾಗಿದ್ದು ಮೂಡಿಗೆರೆಯ ಮಟನ್ ಮಾರ್ಕೆಟ್ ಬಳಿ ಹಾಗೂ ಬಣಕಲ್ ಬಳಿ ಹೆದ್ದಾರಿ ಸಂಪೂರ್ಣ ಗುಂಡಿಮಯವಾಗಿದೆ. ಹೆಚ್ಚಿದ ಗುಂಡಿಗಳಿಂದ ಟ್ರಾಫಿಕ್ ಜಾಮ್ ಅಧಿಕವಾಗುತ್ತಿದ್ದೂ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ತಲುಪಲು ಸಾಧ್ಯವಾಗುತ್ತಿಲ್ಲ ಗುಂಡಿಮಯ ರಸ್ತೆಗಳಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.ಸಾರ್ವಜನಿಕರಿಗೂ ವಾಹನ ಸವಾರಿ ಮಾಡಲು ತುಂಬಾ ಕಷ್ಟ ಪಡುತ್ತಿದ್ದೂ ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು ಎಚ್ಚೆತ್ತು ರಸ್ತೆ ಸರಿಪಡಿಸುವಂತೆ ಆಗ್ರಹಿಸಿದರು