ಚಿಕ್ಕಮಗಳೂರು: ಜಿಲ್ಲೆ ನರಸಿಂಹರಾಜ ತಾಲೂಕಿನ ಕುಪ್ಪೂರು ಹಾಗೂ ಮಡಬೂರು ಗ್ರಾಮಗಳ ಸುತ್ತಮುತ್ತ ಕಳೆದ ಹಲವು ತಿಂಗಳುಗಳಿಂದ ಒಂಟಿ ಕಾಡಾನೆ ಒಂದು ವಿಪರೀತ ಉಪಟಳ ನೀಡುತ್ತಿದ್ದು ಈ ಪುಂಡಾನೆಯನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಹಲವು ಬಾರಿ ಒತ್ತಾಯಿಸಿದರು. ಆದರೆ ಕಳೆದ ವಾರ ನಾಲ್ಕು ದಿನದ ಅಂತರದಲ್ಲಿ ಇಬ್ಬರನ್ನು ಬಲಿ ಪಡೆದ ಪುಂಡಾನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡುತ್ತೇವೆ ಎಂದು ಶೃಂಗೇರಿ ಶಾಸಕ ರಾಜೇಗೌಡ ಮತ್ತು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಭರವಸೆ ನೀಡಿದ್ದರು.

ಆದರೆ ಈ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಸಿಗದ ಕಾರಣ ಸಕ್ರೇಬೈಲಿನಿಂದ ಬಂದಿದ್ದ ಕುಮ್ಕಿ ಆನೆಗಳು ವಾಪಸ್ ತೆರಳಿದ್ದವು . ಇದಾದ ಬಳಿಕ ಶಾಸಕ ಟಿ.ಡಿ ರಾಜೇಗೌಡ ಅವರು ಅರಣ್ಯ ಸಚಿವರ ಬಳಿ ಮನವಿ ಮಾಡಿ ಅನುಮತಿ ಪಡೆದು ಬಂದಿದ್ದರು. ಹೀಗಾಗಿ ಪುಂಡಾಟ ಮೆರೆದ ಆನೆಯನ್ನು ಹಿಡಿಯಲು ಸಕ್ರೇಬೈಲಿನ ನಾಲ್ಕು ಕುಮ್ಕಿ ಆನೆಗಳು ಎನ್ ಆರ್ ಪುರದ ಶೆಟ್ಟಿಕೊಪ್ಪಕ್ಕೆ ಬಂದು ಇಳಿದ್ದಿದ್ದಾವೆ. ಹಾಗೆ ಅರಳಿವಳಿಕೆ ತಜ್ಙರು ಸಹ ಆಗಮಿಸಿದ್ದು ಕುಪ್ಪೂರಿನಿಂದ ಕಾರ್ಯಾಚರಣೆ ಆರಂಘವಾಗಲಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.