ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದ ಕುಪ್ಪೂರಲ್ಲಿ ಉಪಟಳ ನೀಡುತ್ತಿದ್ದ ಮತ್ತೊಂದು ಪುಂಡಾನೆಯನ್ನ ಸೆರೆ ಹಿಡಿಯಲಾಯಿತು.

ನರಸಿಂಹರಾಜಪುರ ತಾಲೂಕಿನ ಕುಪ್ಪೂರು, ದ್ವಾರಮಕ್ಕಿ, ಕೋಟೇಬೈಲು, ಗುಡ್ಡದಮನೆ, ಮಳಲಿ, ನೇರಲೇಕೊಪ್ಪ ಹಾಲಂದೂರು, ಗಾಂಧಿಗ್ರಾಮ, ಬಣಗಿ ಮತ್ತು ಮಡಬೂರು ಗ್ರಾಮಗಳಲ್ಲಿ ರೈತರ ಬೆಳೆಗಳನ್ನ ನಾಶ ಮಾಡುತ್ತಿದ್ದು ಹಾಗೂ ಸಾರ್ವಜನಿಕರ ಜೀವಕ್ಕೆ ತೊಂದರೆ ನೀಡುತ್ತಿರುವ ಒಂಟಿ ಸಲಗ ಸೆರೆ ಹಿಡಿಯಲಾಯಿತು.
ಸಕ್ರೇಬೈಲ್ ನ ಆನೆ ತಂಡದೊಂದಿಗೆ ಇಂದು ಬೆಳಗ್ಗೆ(ಆ.04) ಕಾರ್ಯಚಾರಣೆ ಆರಂಭಿಸಿ, ಒಂದು ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.