ಹಾಸನ: : ಡಾ.ಬಿ.ಆರ್.ಅಂಬೇಡ್ಕರ್ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಮೋಟರ್ ಪಂಪ್ ಪಡೆದಿರುವ ಎಲ್ಲಾ ಫಲಾನುಭವಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಫಲರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಸೋಮವಾರ ತಾಲ್ಲೂಕು ಪಂಚಾಯತಿ ಆವರಣದಲ್ಲಿ 8 ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್, ಮೋಟಾರ್ ಮತ್ತು ಪರಿಕರಗಳನ್ನು ವಿತರಿಸಿ ಮಾತನಾಡಿದರು,ಅಂಬೇಡ್ಕರ್ವ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ವತಿಯಿಂದ ಹಿಂದುಳಿದ ವರ್ಗಗಳಿಗೆ ಈ ಎಲ್ಲ ಸವಲತ್ತುಗಳನ್ನು ನೀಡಲಾಗುತ್ತಿದೆ.
ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಇಲಾಖೆ ಒದಗಿಸಿದೆ. ಮಲೆನಾಡು ಪ್ರದೇಶವಾದರೂ ಕೆಲವು ಕಡೆಗಳಲ್ಲಿ ನೀರಿನ ಕೊರತೆ ಇದೆ ಹೀಗಾಗಿ ಪಂಪ್‌ಸೆಟ್‌ಗಳು ಅನಿವಾರ್ಯವಾಗಿದೆ. ಯೋಜನೆಯನ್ನು ಬಳಸಿಕೊಂಡು ಕೃಷಿ ಕಾರ್ಯವನ್ನು ಕೈಗೊಳ್ಳಿ. ನೀರಾವರಿಗೆ ನೀರನ್ನು ಮಿತವಾಗಿ ಬಳಸಿಕೊಳ್ಳಬೇಕು. ಇದಕ್ಕಾಗಿ ಹನಿ ನೀರಾವರಿ, ಸಿಂಚನ ವ್ಯವಸ್ಥೆ ಸೇರಿದಂತೆ ಆಧುನಿಕ ವಿಧಾನಗಳನ್ನು ಬಳಸಿಕೊಳ್ಳಬೇಕು. ಸರಕಾರ ನೀಡಿದ ಪರಿಕರಗಳನ್ನು ಯಾವುದೇ ಕಾರಣಕ್ಕೆ ಅನ್ಯರಿಗೆ ನೀಡಬಾರದು. ಫಲಾನುಭವಿ ನೇರವಾಗಿ ಬಳಸಿಕೊಳ್ಳಬೇಕು ಎಂದರು. ಪ್ರತಿ ಫಲಾನುಭವಿಗೆ ಒಂದು 7 ಮೋಟಾರ್, ಪಂಪ್, 5,ಪ್ಯಾನಲ್ ಬೋರ್ಡ್ ವಿತರಿಸಲಾಗಿದೆ. ಇದರ ಜತೆಗೆ 81 ಪೈಪ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಎಲ್ಲ ಪರಿಕರಗಳು ಐಎಸ್‌ಐ ಮಾನ್ಯತೆಯನ್ನು ಪಡೆದಿದ್ದು, ಉತ್ತಮ ಗುಣಮಟ್ಟ ಹೊಂದಿವೆ. ಇವುಗಳನ್ನು ರೈತರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಶ್ರುತಿ,ಪ್ರಥಮ ದರ್ಜೆ ಸಹಾಯಕಾಧಿಕಾರಿ ಜಯಶಂಕರ್ ಉಪಸ್ಥಿತರಿದ್ದರು.