ಮೂಡಿಗೆರೆ: ಪಟ್ಟಣದ ಬಸ್ ಸ್ಟಾಂಡ್ ಒಳ ಭಾಗದಲ್ಲಿರುವ ಬೃಹತ್ ಮರ ತೆರವುಗೊಳಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಯಾವ ಕ್ಷಣದಲ್ಲಿ ಯಾರ ತಲೆ ಮೇಲೆ ರೆಂಬೆ ಕೊಂಬೆಗಳು ಬಿದ್ದರೆ ಏನಾಗುತ್ತೋ ಗೊತ್ತಿಲ್ಲ ಎಂಬುದೇ ಭಯದ ವಾತಾವರಣ ಸೃಷ್ಟಿಯಾಗಿದೆ.

ಮಲೆನಾಡು ಭಾಗದಲ್ಲಿ ಧಾರಕಾರವಾಗಿ ಸುರಿಯುತ್ತಿರುವ ಮಳೆ ಒಂದು ಕಡೆ ಭಯ ಹುಟ್ಟಿಸಿದ್ದು ಇನ್ನೊಂದೆಡೆ ಜೀವ ಭಯದಲ್ಲಿ ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಬಸ್ ಸ್ಟಾಂಡ್ ನಲ್ಲಿರುವ ಬೃಹತ್ ಮರದಿಂದ ಈ ಭಯದ ವಾತಾವರಣ ಕಂಡುಬಂದಿರುವುದು.
ಸ್ಥಳೀಯರು, ಪ್ರಯಾಣಿಕರು ಮರ ತಲೆ ಮೇಲೋ ಮೈ ಮೇಲೋ ಈಗ ಆಗ ಬೀಳುತ್ತೆ ಎಂಬ ಭಯದಿಂದ ತಿರುಗಾಡುತ್ತಿದ್ದು ಅಕ್ಕ ಪಕ್ಕದಲ್ಲಿ ಹೋಟೆಲ್, ಬಟ್ಟೆ ಅಂಗಡಿಗಳಿಗೂ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.
ಹಾಗೆ ರಸ್ತೆಯಲ್ಲಿ ಶಾಲಾ ಮಕ್ಕಳು, ಹಿರಿಯರು, ಕಿರಿಯರು, ವಾಹನ ಸವಾರರು ಓಡಾಡುತ್ತಿದ್ದು ವಿದ್ಯುತ್ ತಂತಿ ಕೂಡ ಹಾದು ಹೋಗಿದೆ. ಈಗಾಗಲೇ ಮರದ ರಂಬೆ ಕೊಂಬೆಗಳು ಕೆಳಗೆ ಬಿದ್ದು ಅನೇಕರಿಗೆ ಗಾಯಗಳಾಗಿದ್ದು ಅದೃಷ್ಟವಶಾತ್ ಪ್ರಾಣ ಹಾನಿಗಳು ಸಂಭವಿಸಿಲ್ಲ, ಮುಂದಿನ ದಿನಗಳಲ್ಲಿ ಕೆಟ್ಟ ಘಟನೆಗಳು ನಡೆಯುವ ಮುಂಚೆ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಈ ಸಮಸ್ಸೆಯನ್ನು ಬಗೆಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ