Sunday, August 10, 2025
!-- afp header code starts here -->
Homeಕ್ರೈಮ್ಧರ್ಮಸ್ಥಳದಲ್ಲಿ ಮಾಧ್ಯಮದವರ ಮೇಲಿನ ಹಲ್ಲೆಗೆ KSDMF ಖಂಡನೆ: ಕಾನೂನು ಕ್ರಮಕ್ಕೆ ಗೃಹಸಚಿವರಿಗೆ ಒತ್ತಾಯ

ಧರ್ಮಸ್ಥಳದಲ್ಲಿ ಮಾಧ್ಯಮದವರ ಮೇಲಿನ ಹಲ್ಲೆಗೆ KSDMF ಖಂಡನೆ: ಕಾನೂನು ಕ್ರಮಕ್ಕೆ ಗೃಹಸಚಿವರಿಗೆ ಒತ್ತಾಯ

ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಕಾರ್ಯನಿರತರಾಗಿದ್ದ ಡಿಜಿಟಲ್ ಮಾಧ್ಯಮದವರ ಮೇಲೆ ಮತ್ತು ಇತರೆ ಪತ್ರಕರ್ತರ ಮೇಲೂ ಕೆಲವು ಪುಂಡರು ನಡೆಸಿರುವ ಹಲ್ಲೆ ಇದು ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಡೆದ ದಾಳಿ ಆಗಿದೆ. ಎಂದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಮ್ ಖಂಡಿಸುತ್ತದೆ.

ವಸ್ತುಸ್ಥಿತಿಯನ್ನು ವರದಿ ಮಾಡಲು ಹೋದ ಡಿಜಿಟಲ್ ಮಾಧ್ಯಮದ ಪತ್ರಕರ್ತರನ್ನು ಈ ಗುಂಪು ಟಾರ್ಗೆಟ್ ಮಾಡಿರುವುದು ಹೇಯ ಕೃತ್ಯ. ಧರ್ಮಸ್ಥಳದ ಘನತೆಗೆ ಈ ಪುಂಡರು ಚ್ಯುತಿ ತಂದಿದ್ದಾರೆ. ಹಾಗೆ ಧರ್ಮಸ್ಥಳದಲ್ಲಿ ನಡೆದಿರುವ ವಿದ್ಯಮಾನಗಳು ದೇಶದ ಗಮನಸೆಳೆದಿದ್ದು, ಸಹಜವಾಗಿ ಡಿಜಿಟಲ್ ಮಾಧ್ಯಮಗಳೂ ಸಹ ವರದಿ ಮಾಡಲು ಹೋಗಿದ್ದರಲ್ಲಿ ತಪ್ಪೇನಿದೆ? ಇದು ಪತ್ರಿಕಾ ಸ್ವತಂತ್ರದ ಮೇಲೆ ನಡೆದ ಹಲ್ಲೆ ಆಗಿದೆ. ಚಾನೆಲ್ ನ ವರದಿಗಾರರ ಮೇಲೂ ಹಲ್ಲೆ ನಡೆದಿದ್ದು ಇದನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುತ್ತದೆ.


ತಕ್ಷಣವೇ ಪೊಲೀಸರು ಕ್ರಮ ಕೈಗೊಂಡು ಹಲ್ಲೆ ನಡೆಸಿದ ಪುಂಡರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು. ಡಿಜಿಟಲ್ ಮಾಧ್ಯಮ ಸೇರಿ ಹಲವು ಮಾದ್ಯಮಗಳ ಪ್ರತಿನಿಧಿಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ರಕ್ಷಣೆ ನೀಡಬೇಕು ಎಂದು ರಾಜ್ಯದ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಆಗ್ರಹಪಡಿಸುತ್ತೇವೆ.

ಇದೊಂದು ಸೂಕ್ಷ್ಮ ವಿಚಾರ ಆಗಿದ್ದು, ವರದಿ ಮಾಡಬೇಕಾದರೆ ಸಮತೋಲನ ಮತ್ತು ಸಂಯಮದಿಂದ ವರದಿ ಮಾಡಬೇಕೆಂದು ವೃತ್ತಿ ಬಾಂಧವರನ್ನು ವಿನಂತಿಸುತ್ತೇನೆ ಎಂದು KSDMF ಅಧ್ಯಕ್ಷರಾದ ಸಮೀವುಲ್ಲಾ, KSDMF ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಸಗರಹಳ್ಳಿ ಹಾಗೂ KSDMF ಎಲ್ಲಾ ಪದಾಧಿಕಾರಿಗಳ ನೇತೃತ್ವದಲ್ಲಿ ಗೃಹಸಚಿವರಿಗೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -!-- afp header code starts here -->

Most Popular

Recent Comments

error: Content is protected !!