ಚಿಕ್ಕಮಗಳೂರು:ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ರೈತರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕಾಡಾನೆಗಳು ಕಾಫಿ, ಮೆಣಸು, ಏಲಕ್ಕಿ ಸೇರಿದಂತೆ ಬೆಳೆಗಳನ್ನು ನಾಶಪಡಿಸುತ್ತಿವೆ, ಇದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ರೈತರು ಅರಣ್ಯ ಇಲಾಖೆ ಕೂಡಲೇ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ
ಹಾಗೆ ಆನೆ ಕಾರ್ಯ ಪಡೆ & ಅರಣ್ಯ ಇಲಾಖೆ ಮೂಡಿಗೆರೆ ಇವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರ ಗಮನಿಸಬೇಕಾಗಿದ್ದು ರಾತ್ರಿ ವೇಳೆ ಯಾರು ಕೂಡ ವಿನಾ ಕಾರಣ ಮನೆಯಿಂದ ಹೊರಗೆ ಬರಬಾರದು ಹಾಗೂ ತಿರಗಾಡಬಾರದು. ಹಾಗೂ ಬೆಳಗ್ಗಿನ ಸಮಯದಲ್ಲಿ ವ್ಯಾಯಾಮಕ್ಕಾಗಿ ಓಡುವ ಹಾಗೂ ನಡೆದಾಡುವ ಸಾರ್ವಜನಿಕರು ಹಾಗೂ ತೋಟಗಳಿಗೆ ಹೋಗುವ ಕಾಫಿ ತೋಟದ ಮಾಲೀಕರು, ರೈತರು, ಕಾರ್ಮಿಕರ ಸುರಕ್ಷೆಯ ದೃಷ್ಠಿಯಿಂದ ಅರಣ್ಯ ಇಲಾಖೆ ಮಾಹಿತಿ ಪಡೆಯದೆ ಯಾರು ಕೂಡ ತೋಟಗಳಿಗೆ ಹೋಗಬಾರದು.
ಹಾಗೂ ತಮ್ಮ ಗ್ರಾಮದ ಸುತ್ತ ಮುತ್ತ ಕಾಡನೆಗಳ ಓಡಾಟ ಕಂಡು ಬಂದಲ್ಲಿ ಆನೆ ಕಾರ್ಯ ಪಡೆ ಮೂಡಿಗೆರೆ ಇವರ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. 7204004261 ಸಂಪರ್ಕಿಸುವುದು ಎಂದು ಮಾಹಿತಿ ರವಾನೆ ಮಾಡಿದ್ದಾರೆ.
ಆನೆ ಕಾರ್ಯ ಪಡೆ & ಅರಣ್ಯ ಇಲಾಖೆ ಮೂಡಿಗೆರೆ ಇವರ ಪ್ರಕಟಣೆ.