ಮೂಡಿಗೆರೆ: ಪಟ್ಟಣದಲ್ಲಿ ವಾಹನ ದಟ್ಟಣೆ ನಿವಾರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಬೇಕಾಬಿಟ್ಟಿ ರಸ್ತೆಯ 2 ಕಡೆ ವಾಹನ ನಿಲ್ಲಿಸಿ ತೆರಳಿದರೆ ಇನ್ಮುಂದೆ ಬರೆ ಬೀಳಲಿದ್ದು ವಾಹನ ಸವಾರರು ಎಚ್ಚರವಾಗಿರಬೇಕು. ಯಾಕಂದರೆ ಹೊಸ ಸೂಚನಾ ಫಲಕಗಳನ್ನ ಅಳವಡಿಸಿಲು ಪೊಲೀಸರು ಸನ್ನದ್ಧರಾಗಿದ್ದಾರೆ.
ಹೌದು … ಪಟ್ಟಣದಲ್ಲಿ ವಾಹನ ನಿಲುಗಡೆ ಮತ್ತು ವಾಹನ ನಿಷೇಧಿತ ಪ್ರದೇಶಗಳಲ್ಲಿ ಮೂಡಿಗೆರೆ ಪೊಲೀಸ್ ಇಲಾಖೆ ಸೂಚನಾ ಫಲಕ ಅಳವಡಿಸಿದ್ದಾರೆ. ಸಂಬಂಧಪಟ್ಟಂತೆ ಸುಗಮ ಸಂಚಾರ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡುವ ಹಾಗೂ ಸಾರ್ವಜನಿಕರ ಹಿತಾದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಚಾರಿ ನಿಯಂತ್ರಣ ಕ್ರಮಗಳನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿರುತ್ತಾರೆ.
ಮೂಡಿಗೆರೆ ಪಟ್ಟಣದ ಎಂ.ಜಿ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್ ಸೂಚನಾ ಫಲಕ ಅಳವಡಿಸಿದ್ದು ಪ್ರತಿನಿತ್ಯ ಯಾವ ಬದಿಗಳಲ್ಲಿ ಯಾವ ವಾಹನ ನಿಲ್ಲಿಸಬೇಕು ಎಂಬುದನ್ನು ತಿಳಿಸಿದೆ.
ಮನಬಂದಂತೆ ಪಾರ್ಕಿಂಗ್ ಮಾಡಿದರೆ ದಂಡ ಖಚಿತವಾಗಿದ್ದು ನಾಲ್ಕು ಚಕ್ರದ ವಾಹನ ಎಲ್ಲಿ ನಿಲುಗಡೆ ಎಂಬುದು ಖಾತ್ರಿ ಪಡಿಸಿಕೊಂಡು ವಾಹನ ಪಾರ್ಕಿಂಗ್ ಮಾಡಬೇಕು ಏಕಮುಖ ಸಂಚಾರ ನಿಯಮಗಳು ಜಾರಿಯಲಿದ್ದು ರಸ್ತೆ ನಿಯಮ ಪಾಲನೆ ಮಾಡುವಂತೆ ಪೊಲೀಸ್ ಇಲಾಖೆ ಸೂಚಿಸಲಾಗಿದೆ..
