Saturday, August 8, 2026
Homeಜಿಲ್ಲಾಸುದ್ದಿಹಾಸನ: ಡಾ.ವಿಷ್ಣುವರ್ಧನ್‌ ಸ್ಮಾರಕವನ್ನು ನೆಲಸಮ: ಜಿಲ್ಲಾ ಡಾಕ್ಟರ್‌ ವಿಷ್ಣುಸೇನಾ ಸಮಿತಿ ವತಿಯಿಂದ ಪ್ರತಿಭಟನೆ

ಹಾಸನ: ಡಾ.ವಿಷ್ಣುವರ್ಧನ್‌ ಸ್ಮಾರಕವನ್ನು ನೆಲಸಮ: ಜಿಲ್ಲಾ ಡಾಕ್ಟರ್‌ ವಿಷ್ಣುಸೇನಾ ಸಮಿತಿ ವತಿಯಿಂದ ಪ್ರತಿಭಟನೆ

Telegram Group
Join Now

ಹಾಸನ: ಡಾ.ವಿಷ್ಣುವರ್ಧನ್‌ ಅವರ ಸ್ಮಾರಕವನ್ನು ನೆಲಸಮ ಮಾಡಿರುವುದನ್ನ ಖಂಡಿಸಿ ನಗರದಲ್ಲಿ ಹಾಸನ ಜಿಲ್ಲಾ ಡಾಕ್ಟರ್‌ ವಿಷ್ಣುಸೇನಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.

ಈ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಮಹಾಮತೇಶ್‌ ಮಾತನಾಡಿ, 15 ವರ್ಷಗಳ ಹಿಂದೆ ವಿಷ್ಣುವರ್ಧನ್‌ ಅವರು ವಿಧಿವಶರಾಗಿದ್ದರು ಸರ್ಕಾರಿ ಗೌರವಗಳೊಂದಿಗೆ ಅಭಿಮಾನ್‌ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ ಇದೀಗ ಅವರ ಸಮಾಧಿಯನ್ನು ದ್ವಂಸಗೊಳಿಸಿದ್ದು ಖಂಡನೀಯ ಎಂದರು.

ವಿಷ್ಣುವರ್ಧನ್‌ ಅವರ ಸ್ಮಾರಕ ಸ್ಥಳವನ್ನು ಪುಣ್ಯಸ್ಥಳವೆಂದು ಭಾವಿಸಿ ಹುಟ್ಟುಹಬ್ಬ ಹಾಗೂ ಪುಣ್ಯ ತಿಥಿಯನ್ನು ಆಚರಿಸುತ್ತಿದ್ದರು. ಆದರೆ ಗುರುವಾರ ರಾತ್ರಿ ಏಕಾಏಕಿ ಸಮಾಧಿಯನ್ನು ಹೊಡೆದುಹಾಕಿದ್ದು ಕನ್ನಡ ಚಿತ್ರರಂಗ ಹಾಗೂ ಹಿರಿಯ ಕಲಾವಿದರಿಗೆ ಮಾಡಿದ ಅವಮಾನವಾಗಿದೆ ಎಂದಯ ಅಸಮಾಧಾನವ್ಯಕ್ತಪಡಿಸಿದರು.

ಕೂಡಲೇ ಸರ್ಕಾರ ಎಚ್ಚೆತ್ತುಗೊಂಡು ಸ್ಮಾರಕವನ್ನು ಅದೇ ಸ್ಥಳದಲ್ಲಿ ಪುನರ್‌ ಸ್ಥಾಪಿಸಿಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments