Thursday, February 12, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ನಿಲ್ಲದ ಕಾಡಾನೆಗಳ ಹಾವಳಿ: ಆನೆ ಓಡಿಸಲು ಗ್ರಾಮಸ್ಥರ ಹರಸಾಹಸ!

ಬಾಳೆಹೊನ್ನೂರು: ನಿಲ್ಲದ ಕಾಡಾನೆಗಳ ಹಾವಳಿ: ಆನೆ ಓಡಿಸಲು ಗ್ರಾಮಸ್ಥರ ಹರಸಾಹಸ!

ಎನ್‌ ಆರ್‌ ಪುರ: ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಕಾಡಾನೆ ಹಾವಳಿಗೆ ಜನರು ಆತಂಕದಲ್ಲೇ ದಿನ ದೂಡುವಂತಾಗಿದೆ.

ಬಾಳೆಹೊನ್ನೂರು ಪಟ್ಟಣಕ್ಕೆ ಹೊಂದಿಕೊಂಡಿರುವ ಕಾನ್ಕೆರೆ ಗ್ರಾಮದಲ್ಲಿ ಹಲವು ತೋಟಗಳಿಗೆ ಶುಕ್ರವಾರ ಕಾಡಾನೆಗಳು ತೋಟಗಳಿಗೆ ನುಗ್ಗಿದ್ದು ಬೆಲೇಗಳನ್ನ ಸಹ ನಾಶಮಾಡಿದ್ದು ಪಟ್ಟಣದ ನಿರ್ಮಲ ಕಾನ್ವೆಂಟ್‌ ಸ್ಕೂಲ್‌ ಹಿಂಭಾಗ ಬೀಡಿ ಬಿಟ್ಟಿದ್ದನ್ನ ಸಾರ್ವಜನಿಕರು ತಿಳಿಸಿದ್ದಾರೆ.

ಬಾಳೆಹೊನ್ನೂರು ಭಾಗದ ಹಲವು ಗ್ರಾಮಗಳಲ್ಲಿ ಹತ್ತಾರು ಕಾಡಾನೆಗಳು ಅರಣ್ಯದಲ್ಲಿ ಬೀಡು ಬಿಟ್ಟಿದ್ದು, ರಾತ್ರಿ ವೇಳೆ ರೈತರ ಜಮೀನಿಗೆ ನುಗ್ಗಿ ಹಾನಿ ಮಾಡುತ್ತಿವೆ.ಇದೇ ಪರಿಸ್ಥಿತಿ ಮುಂದುವರಿದಲ್ಲಿ ರೈತರು ಜೀವನ ಸಾಗಿಸುವುದೇ ಕಷ್ಟಕರವಾಗಿದೆ.

ಹಾಗೆ ಪಟ್ಟಣದ ಸಮೀಪದ ಮಕ್ಕಿಮನೆ, ಕಾರ್‌ ಗದ್ದೆ, ದೊಡ್ಡಹಡ್ಲು, ಕಣಬೂರು, ಮಾಗೋಡು, ಅಕ್ಷರನಗರ ಭಾಗದಲ್ಲಿಯೂ ಕಾಡಾನೆಗಳು ಜಮೀನುಗಳಿಗೆ ದಾಳಿ ಮಾಡಿದ್ದು ಹಲವು ತೋಟಗಳಿಗೆ ಸಂಚರಿಸಿವೆ. ಎರಡು ಕಾಡಾನೆಗಳನ್ನು ಕಂಡು ಗಾಬರಿಗೊಂಡಿರುವ ಗ್ರಾಮಸ್ಥರು ಅರನ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು ಗ್ರಾಮಸ್ಥರೇ ಆನೆಗಳನ್ನು ಓಡಿಸಲು ಪ್ರಯತ್ನ ಪಟ್ಟಿದ್ದಾರೆ.

ಶಾಸಕರು , ಅರಣ್ಯ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸದಿದ್ದರೆ ರೈತರ ಸಹನೆ ಕಟ್ಟೆಯೊಡೆದು ಪರಿಣಾಮ ತೀವ್ರಗೊಳ್ಳಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!