Thursday, February 12, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಅರಣ್ಯ ಸಚಿವರೇ ಕಾಣ್ತಿಲ್ವಾ?- ತೋಟಕ್ಕೆ ಬರುತ್ತಿದ್ದ ಕಾಡಾನೆಗಳು ಈಗ ಮನೆ ಅಂಗಳಕ್ಕೆ ಬರಲು...

ಬಾಳೆಹೊನ್ನೂರು: ಅರಣ್ಯ ಸಚಿವರೇ ಕಾಣ್ತಿಲ್ವಾ?- ತೋಟಕ್ಕೆ ಬರುತ್ತಿದ್ದ ಕಾಡಾನೆಗಳು ಈಗ ಮನೆ ಅಂಗಳಕ್ಕೆ ಬರಲು ಪ್ರಾರಂಭ

ಬಾಳೆಹೊನ್ನೂರು: ಕಾಫಿನಾಡಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿ ಹೆಚ್ಚಾಗಿದ್ದು ಗ್ರಾಮಸ್ಥರೆಲ್ಲರೂ ದಿನಾಲು ಭಯದಲ್ಲೇ ಒಡಾಟ ಮಾಡುತ್ತಿದ್ದ ಜೀವಭಯದಲ್ಲೇ ಬದುಕುತ್ತಿದ್ದರು. ಆದರೆ ಇಷ್ಟು ದಿನ ತೋಟಕ್ಕೆ ಬರುತ್ತಿದ್ದ ಕಾಡನೆಗಳು ಈಗ ಮನೆ ಅಂಗಳಕ್ಕೆ ಬರಲು ಪ್ರಾರಂಭ ಮಾಡಿವೆ. ಬಾಳೆಹೊನ್ನೂರು ಸಮೀಪದ ಕಾನ್ಕೆರೆ ಸುತ್ತಮುತ್ತ ಇದನ್ನ ಗಮನಿಸಬಹುದು.

ಅರಣ್ಯ ಸಚಿವರೇ, ಶಾಸಕರೇ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೇ, ರೈತರ ಜಾನುವಾರುಗಳು ಕಾಡಿಗೆ ಹೋದಲ್ಲಿ ಪ್ರಕರಣ ದಾಖಲು ಮಾಡುವ ಎಚ್ಚರಿಕೆ ನೀಡುವ ನೀವುಗಳು, ಕಾಡಿನ ಪ್ರಾಣಿಗಳು ರೈತರ ಮನೆ ಬಾಗಿಲಿಗೆ ಬಂದರೂ ಸುಮ್ಮನಿರುವುದು ಯಾತಕ್ಕಾಗಿ ಎಂದು ಬಾಳೆಹೊನ್ನೂರ ಗ್ರಾಮಸ್ಥರು ಅಚಿವರ ವಿರುದ್ಧ ಮತ್ತೆ ರೊಚ್ಚಿಗೆದ್ದಿದ್ದಾರೆ.

ಒಂದು ಕಾಡಾನೆ, ಎರಡು ಕಾಡಾನೆ ಹಿಡಿದು ಕಣ್ಣೀರು ಒರೆಸುವ ಆದೇಶ ಮಾಡುವುದನ್ನು ಬಿಟ್ಟು ಎಲ್ಲಾ ಕಾಡಾನೆಗಳನ್ನು ಹಿಡಿಯುವ ಆದೇಶ ಜಾರಿ ಮಾಡಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!