Wednesday, February 11, 2026
Homeಜಿಲ್ಲಾಸುದ್ದಿಬಾಳೆಹೊಳೆಯ ಕಾಡಿನ ಮೂಲಕ ಕಳಸ ಮೆಸ್ಕಾಂನ ಲಿಂಕ್ ಲೈನ್ʼಗೆ ಸಂಸದರ ಮೂಲಕ ಅನುಮೋದನೆ!

ಬಾಳೆಹೊಳೆಯ ಕಾಡಿನ ಮೂಲಕ ಕಳಸ ಮೆಸ್ಕಾಂನ ಲಿಂಕ್ ಲೈನ್ʼಗೆ ಸಂಸದರ ಮೂಲಕ ಅನುಮೋದನೆ!

ಚಿಕ್ಕಮಗಳೂರು: ಬಹು ಬೇಡಿಕೆಯ ಬಸರೀಕಟ್ಟೆ ಕೊಪ್ಪ ವಿಭಾಗದ ಮೆಸ್ಕಾಂ ಮತ್ತು ಕಳಸ ವಿಭಾಗದ ಮೆಸ್ಕಾಂ ನ ಲಿಂಕ್ ಲೈನ್ (ಬಸರೀಕಟ್ಟೆ ಕಳಸ ವೃತ್ತದಿಂದ ಡೋಬಿಹಳ್ಳದವರೆಗಿನ ) ಅನ್ನು ಮಾಡುವಂತೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ( DISHA )ಸಭೆಯಲ್ಲಿ ಪ್ರಸ್ತಾಪಿಸಿದ್ದ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ಸದರಿ ಪ್ರಸ್ತಾವನೆಗೆ ಮಾನ್ಯ ಸಂಸದರ ಸೂಚನೆಯ ಮೇರೆಗೆ ಅನುಮೋದನೆ ಸಿಕ್ಕಿದ್ದು ಶೀಘ್ರವಾಗಿ ಕೆಲಸ ಪ್ರಾರಂಭವಾಗಲಿದ್ದು ಸ್ಪಂದಿಸಿದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಹಾಗೂ ಮೆಸ್ಕಾಂ ಆಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಪಬ್ಲಿಕ್ ಇಂಪ್ಯಾಕ್ಟ್ ಗೆ ತಿಳಿಸಿದರು.

ಇದರಿಂದಾಗಿ ಮಳೆಗಾಲದಲ್ಲಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿರುವ ಹಾಗೂ ಅನೇಕ ವಾರಗಳ ತನಕವೂ ವಿದ್ಯುತ್ ಸಂಪರ್ಕವಿಲ್ಲದೆ ನಿತ್ಯ ಜೀವನ ನಡೆಸಲು ಕಷ್ಟ ಪಡುತ್ತಿದ್ದ ಬಾಳೆಹೊಳೆಯ ಕಾಡಿನ ಮೂಲಕ ಕಳಸ ಮೆಸ್ಕಾಂ ವಿಭಾಗದ ವಿದ್ಯುತ್ ಸಂಪರ್ಕ ಹೊಂದಿರುವ ಹೊನ್ನಗುಂಡಿ , ಮೇರ್ತಿ ಬಡಾವಣೆಯ ಮೆಸ್ಕಾಂ ಗ್ರಾಹಕರಿಗೆ ಹಾಗೂ ಸರಕಾರಿ ವಸತಿ ನಿಲಯಗಳ ಧೀರ್ಘ ಕಾಲದ ಸಮಸ್ಯೆಗೆ ಪರಿಹಾರ ಸಿಗುವಂತಾಗಿದೆ ಎಂದರು.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!