ಚಿಕ್ಕಮಗಳೂರು: ಕಾಂಗ್ರೆಸ್ ಡಿಎನ್ಎಯಲ್ಲಿ ಸರ್ವಾಧಿಕಾರ, ಕಾಂಗ್ರೆಸ್ಸಿನ ಸರ್ವಾಧಿಕಾರಿಯನ್ನು ಯಾರು ಪ್ರಶ್ನಿಸುವಂತಿಲ್ಲ. ರಾಹುಲ್ ಗಾಂಧಿಯ ಬೇಜವಾಬ್ದಾರಿಯುತ ಸುಳ್ಳು ಆರೋಪವನ್ನು ಒಪ್ಪದೇ, ಸತ್ಯವನ್ನು ಒಪ್ಪಿಕೊಂಡ ಸಹಕಾರೀ ಧುರೀಣ, ST ನಾಯಕ, ಸಚಿವ ಶ್ರೀ ಕೆ ಎನ್ ರಾಜಣ್ಣ ಅವರ ರಾಜೀನಾಮೆ ಪಡೆದುಕೊಂಡ ಕಾಂಗ್ರೆಸ್, ಪಕ್ಷದಲ್ಲಿ ಸತ್ಯ ಹೇಳೋಕೆ ಅವಕಾಶ ಇಲ್ಲ ಎಂಬುದನ್ನು ಮತ್ತೊಮ್ಮೆ ಶ್ರುತಪಡಿಸಿವೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಮೂರ್ಖರ ರಾಜ್ಯದಲ್ಲಿ ಬುದ್ದಿವಂತಿಕೆ ತೋರಿಸಬಾರದು, ರಾಹುಲ್ ಗಾಂಧಿ ಅವರು ಮತಗಳ್ಳತನದ ಸುಳ್ಳು ಆರೋಪವನ್ನು ಚುನಾವಣಾ ಆಯೋಗದ ಮೇಲೆ ಮಾಡಿದರು, ಆದರೆ ರಾಜಣ್ಣ ಇರುವ ಸತ್ಯವನ್ನು ಹೇಳಿದರು. ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ರಾಜ್ಯ ಸರ್ಕಾರದ ಅಧಿಕಾರಿಗಳು. ಮತದಾರರ ಪಟ್ಟಿಯ ಮೊದಲ ಹಂತದ ಪರಿಷ್ಕರಣೆಯ ನಂತರ ಕರಡು ಪ್ರತಿ ಕೊಡುತ್ತಾರೆ, ಆಗ ನೋಡಿಕೊಳ್ಳದೆ, ಅದನ್ನು ಒಪ್ಪಿಕೊಂಡು, ಈಗ ಹೀಗೆ ಆರೋಪ ಮಾಡಿರುವುದು ಸರಿಯೇ ಎಂದು ಪ್ರಶ್ನಿಸಿದರು. ನಮ್ಮದೇ ಸರ್ಕಾರದ ತಪ್ಪು ಎಂದು ಹೇಳಿದರು, ಈ ಸತ್ಯ ಹೇಳಿದ್ದಕ್ಕೆ ವಾಲ್ಮೀಕಿ ಸಮಾಜದ ನಾಯಕ, ಸಹಕಾರಿ ಧುರೀಣ ರಾಜಣ್ಣ ಅವರ ತಲೆದಂಡ. ಇದು ಕಾಂಗ್ರೆಸ್ ನಲ್ಲಿ ಒಂದು ಕುಟುಂಬದ ಸರ್ವಾಧಿಕಾರ ಇದೆ, ಆ ಸರ್ವಾಧಿಕಾರದ ತಪ್ಪು ನಡೆಯನ್ನ ಯಾರು ಪ್ರಶ್ನಿಸುವಂತಿಲ್ಲ ಎಂಬುದನ್ನು ಬಹಳ ಸ್ಪಷ್ಟವಾಗಿ ನಿರೂಪಿಸುತ್ತದೆ. ಸತ್ಯ ಹೇಳಿದರೆ ರಾಜಣ್ಣ ಅವರಿಗೆ ಆದ ಗತಿಯೇ ಇನ್ನುಳಿದವರಿಗೂ ಆಗುತ್ತದೆ.
ಹಾಗಾಗಿಯೇ ಬುದ್ಧಿವಂತರಾಗಿರುವಂತಹ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಯ ಶ್ರೀ ಡಿಕೆ ಶಿವಕುಮಾರ್ ಅವರು, ಕಾಂಗ್ರೇಸ್ ರಾಷ್ಟೀಯ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು, ಮೂರ್ಖರ ಜೊತೆ ಮೂರ್ಖರ ಹಾಗೆ ಇದ್ದುಬಿಡೋಣ ಎನ್ನುವಂತೆ ಹಲವು ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿ ಇದ್ದಾರೆ. ರಾಹುಲ್ ಗಾಂಧಿ “ಕಾಗೆ ಬೆಳ್ಳಗಿದೆ” ಎಂದು ಹೇಳಿದರೆ ರಾಹುಲ್ ಗಾಂಧಿ ಜೊತೆಗೆ ಇವರುಗಳು “ಹೌದು, ಹೌದು, ಕಾಗೆ ಬೆಳ್ಳಗೆ ಕಾಣುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ.
ರಾಜಣ್ಣ ನೀವ್ಯಾಕೆ ಸತ್ಯ ಹೇಳಕ್ಕೆ ಹೋದ್ರಿ, ನಿಮ್ ಪಾರ್ಟಿ ನಲ್ಲಿ ಸತ್ಯ ಹೇಳುವ ಹಾಗಿಲ್ಲ. ನಿಮ್ಮ ಪಕ್ಷದಲ್ಲಿ ನೀವು ಹೈಕಮಾಂಡ್ ಹೇಳಿಕೆಯನ್ನು ಪ್ರಶ್ನಿಸುವ ಹಾಗಿಲ್ಲ, ಸತ್ಯ ಒಪ್ಪಿಕೊಂಡರೆ ಕಾಂಗ್ರೆಸ್ ನಲ್ಲಿ ಇದೇ ಗತಿಯಾಗುತ್ತದೆ. ನಿಮ್ಮ ಪಕ್ಷ ಕಾಂಗ್ರೆಸ್ಸಿನಲ್ಲಿ ಆಂತರಿಕ ಪ್ರಜಾಪ್ರಭುತ್ಬ ಇಲ್ಲ . ಕಾಂಗ್ರೆಸ್ಸಿಗೂ ಪ್ರಜಾಪ್ರಭುತ್ವಕ್ಕೂ ಸಂಬಂಧ ಇಲ್ಲ, ಕಾಂಗ್ರೆಸ್ಸಿಗೂ ಸತ್ಯಕ್ಕೂ ಸಂಬಂಧ ಇಲ್ಲ.
ಈಗಲೂ ನೀವು ಬೇಕಾದರೆ ಪರಿಶೀಲನೆ ಮಾಡಿ, ಚುನಾವಣಾ ಆಯೋಗಕ್ಕೆ ದೆಹಲಿನಲ್ಲಿ ಒಂದು ಕಚೇರಿ, ಬೆಂಗಳೂರಿನಲ್ಲಿ ಒಂದು ಕಚೇರಿ , ಕಚೇರಿ ಸಿಬ್ಬಂದಿ ಬಿಟ್ಟು! ಅವರಿಗೆ ಮೂಲಭೂತ ಸಂರಚನೆ ಅಂದ್ರೆ Basic structure ಇರುವುದಿಲ್ಲ, ಅವರು ಚುನಾವಣಾ ಕಾರ್ಯ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಯಾರು ಮುಖಾಂತರ ಮಾಡಿಸುತ್ತಾರೆ, ಬೆಂಗಳೂರು ಮಹಾನಗರದಲ್ಲಿ ಬಿಬಿಎಂಪಿ ಅಧಿಕಾರಿಗಳು ಮತ್ತು ಶಿಕ್ಷಕರು, ಬೇರೆ ಭಾಗಗಳಲ್ಲಿ ಶಿಕ್ಷಕರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಮುಖಾಂತರ ಮಾಡಿಸುತ್ತಾರೆ. ಕಂದಾಯ ಇಲಾಖೆ ಅಧಿಕಾರಿಗಳು, ಅವರು ರಾಜ್ಯ ಸರ್ಕಾರದ ನೌಕರರು, ಶಿಕ್ಷಕರು, ಅವರು ರಾಜ್ಯ ಸರ್ಕಾರದ ನೌಕರರು, ಗ್ರಾಮಾಂತರ ಪ್ರದೇಶಗಳಲ್ಲಿ, ಪ್ರತಿ ಜಿಲ್ಲೆಯಲ್ಲಿ, DEO (ಡಿಸ್ಟಿಕ್ ಎಲೆಕ್ಟ್ರೋ ಆಫೀಸರ್) ಯಾರಿರ್ತಾರೆ? ಜಿಲ್ಲಾಧಿಕಾರಿಯೆ ಡಿ ಇ ಓ. ಬೆಂಗಳೂರು ಮಹಾನಗರದಲ್ಲಿ ಬಿಬಿಎಂಪಿ ಕಮಿಷನರ್ ಇರುತ್ತಾರೆ, ಆ ಬಿಬಿಎಂಪಿ ಕಮಿಷನರ್ ಅನ್ನು ಮತ್ತು ಜಿಲ್ಲಾಧಿಕಾರಿಯನ್ನು Transfer ಮಾಡಿ ಪೋಸ್ಟ್ ಕೊಟ್ಟವರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ರಾಜ್ಯದಲ್ಲಿಯೇ, ರಾಜ್ಯದ ಅಧಿಕಾರಿಗಳು ನಡೆಸಿದ ಕರಡು ಪರಿಷ್ಕರಣೆಯಲ್ಲಿ ಮತ ಕಳ್ಳತನ ಆಗಿದೆ ಅಂದರೆ ಯಾರು ಹೊಣೆ? ಸಿದ್ದರಾಮಯ್ಯನವರೆ? ಅಥವಾ ಮೋದಿಯವರೇ? ರಾಜ್ಯದ ಅಧಿಕಾರಿಗಳು ಯಾರ ಮಾತು ಕೇಳುತ್ತಾರೆ? ಕೇಂದ್ರ ಹಾಗು ರಾಜ್ಯ ಚುನಾವಣಾ ಆಯೋಗ ಕಾಲಕಾಲಕ್ಕೆ ಕೇವಲ ಸರ್ಕ್ಯುಲರ್ ಮಾತ್ರ ಹೊರಡಿಸುತ್ತದೆ.
ರಾಜಣ್ಣ ಇರುವ ಸತ್ಯ ಹೇಳಿದರು. ತಪ್ಪು ರಾಜ್ಯ ಸರ್ಕಾರದ ಕಡೆಯಿಂದ ಆಗಿದೆ, ಈಗ ಯಾರನ್ನೋ ದೂರುತ್ತಾ ಇದ್ದೀವಿ, ತಪ್ಪು ನಮ್ಮದೇ ಅಂತ ಒಪ್ಪಿಕೊಂಡರು ರಾಜಣ್ಣ. ತಪ್ಪು ನಮ್ದೇ ಅಂತ ಸತ್ಯ ಹೇಳಿದ್ದಕ್ಕೆ ಎಸ್ ಟಿ ನಾಯಕನ ಬಲಿ,
ರಾಹುಲ್ ಗಾಂಧಿಯ ಜವಾಬ್ದಾರಿಇಲ್ಲದ, ಸುಳ್ಳು ಹೇಳಿಕೆಯನ್ನ ಅವರು ಸಮರ್ಥಿಸದೆ ಇದ್ದ ಕಾರಣಕ್ಕೆ ಅವರು ಬಲಿಯಾದರು. ಅವರು ರಾಹುಲ್ ಗಾಂಧಿ ಅವರ ಬೇಜವಾಬ್ದಾರಿ ಹೇಳಿಕೆ ಅಂತ ಗೊತ್ತಿದ್ದರೂ ಕೂಡ ಅವರು ಉಳಿದ ಮೂರ್ಖರಂತೆ ಒಪ್ಪಿಕೊಂಡು ಸುಮ್ಮನಿರುತಿದ್ದರೆ, ಅವರ ತಲೆದಂಡ ಆಗುತ್ತಿರಲಿಲ್ಲ, ಅವರು ಸತ್ಯ ಹೇಳಿದರು ,ಬುದ್ಧಿವಂತಿಕೆ ತೋರಿಸಿದರು ಅದಕ್ಕೆ ತಲೆ ತಂಡ , ಕಾಂಗ್ರೆಸ್ ನಲ್ಲಿ ಬುದ್ದಿವಂತಿಕೆ ಇರುವವರಿಗೆ ಕಾಲವಲ್ಲ, ನೀವು ಬುದ್ಧಿವಂತರಾಗಿದ್ದರೂ ಮೂರ್ಖರಂತೆ ವರ್ತಿಸಬೇಕು, ವ್ಯವಹರಿಸಬೇಕು .
