Friday, June 26, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು : RTO ಕಚೇರಿ ಮೇಲೆ ದಿಢೀರ್‌ ಲೋಕಾ ದಾಳಿ, ಕಡತಗಳ ಪರಿಶೀಲನೆ: ದಲ್ಲಾಳಿಗಳು ದಿಕ್ಕಾಪಾಲು!

ಚಿಕ್ಕಮಗಳೂರು : RTO ಕಚೇರಿ ಮೇಲೆ ದಿಢೀರ್‌ ಲೋಕಾ ದಾಳಿ, ಕಡತಗಳ ಪರಿಶೀಲನೆ: ದಲ್ಲಾಳಿಗಳು ದಿಕ್ಕಾಪಾಲು!

ಚಿಕ್ಕಮಗಳೂರು: ಲೋಕಾಯುಕ್ತ ಅಧಿಕಾರಿಗಳಿಂದ ಚಿಕ್ಕಮಗಳೂರು ಆರ್‌ ಟಿ ಒ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳನ್ನ ಪರಿಶೀಲನೆ ನಡೆಸಿದ್ದಾರೆ. ಆರ್‌ ಟಿ ಒ ಕಚೇರಿಯಲ್ಲಿ ಹೆಚ್ಚು ಭ್ರಷ್ಟಚಾರ ನಡೆಯುತ್ತಿದೆ ಎಂದು ಆರೋಪ ನಿರಂತರವಾಗಿ ಕೇಳಿ ಬಂದ ಹಿನ್ನೆಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿ ಶಾಕ್‌ ಕೊಟ್ಟಿದ್ದಾರೆ.

ಆರ್‌ ಟಿ ಓ ರಾಕೇಶ್‌ ಕುಮಾರ್‌, ಇನ್ಸೆಪೆಕ್ಟರ್ ಗಳಾದ ಮಂಜುನಾಥ್‌ ಮತ್ತು ವಿಜಯ್‌ ಕುಮಾರ್‌ಾವರ ಕೊಠಡಿಯಲ್ಲಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ದಲ್ಲಾಳಿಗಳು ದಿಕ್ಕಪಾಲಾಗಿ ಓಡಿಹೋಗಿದ್ದಾರೆ.ಸಾರಿಗೆ ಕೆಲಸಗಳನ್ನು ಮಾಡಿಸಿಕೊಡುವ ಸಂಧರ್ಭದಲ್ಲಿ ನೇರವಾಗಿ ಲಂಚ ಕೇಳುತ್ತಿದ್ದ ಆರೋಪಗಳು ಕಂಡುಬರುತ್ತಿದ್ದವು.

ಭ್ರಷ್ಟ ಅಧಿಕಾರಿಗಳು ವಸೂಲಿಗೆ ಮುಂದಾಗಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿ ಕಡತಗಳನ್ನ ಪರಿಶೀಲಿಸಿ ಹಾಗೆ ಬಿಸಿ ಮುಟ್ಟಿಸಿ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments