Thursday, February 12, 2026
Homeಜಿಲ್ಲಾಸುದ್ದಿಬಣಕಲ್: ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ: ಹಿಂದೂ ಮುಖಂಡರಿಂದ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ!

ಬಣಕಲ್: ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ: ಹಿಂದೂ ಮುಖಂಡರಿಂದ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ!

ಮೂಡಿಗೆರೆ: ಮುಸ್ಲಿಂ ಯುವಕ ಜೊತೆಯಲ್ಲಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಯುವತಿ ಪರಾರಿಯಾಗಿದ್ದು ಬಣಕಲ್‌ ಪ್ರದೇಶದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.

ಆಶಿಕ್‌ ಎಂಬ ಮುಸ್ಲಿಂ ಯುವಕನ ಜೊತೆಯಲ್ಲಿ 22 ವರ್ಷದ ಪೂಜಾ ಕಳೆದ ಮೂರು ದಿನಗಳ ಹಿಂದೆ ಮನೆಬಿಟ್ಟು ಓಡಿ ಹೋಗಿದ್ದಾಳೆ. ಪತುಯು ಬನಕಲ್‌ ಪೊಲೀಸ್‌ ಠಾಣೆಗೆ ನಾಪತ್ತೆಯಾಘಿರುವ ಬಗ್ಗೆ ದೂರು ನೀಡಿದ್ದಾರೆ.

ಪತಿಯ ದೂರಿನನ್ವಯ ಕಾರ್ಯಚರಣೆ ನಡೆಸಿ ಪೊಲೀಸರು ಪತ್ತೆ ಮಾಡಿದ್ದಾರೆ. ಆಗ ಮುಸ್ಲಿಂ ಯುವಕನ ಜೊತೆ ತೆರಳಿರುವ ಬಗ್ಗೆ ಮಾಹಿತಿ ದೊರೆತಿದೆ.

ಬಣಕಲ್‌ ಪೊಲೀಸ್‌ ಠಾಣೆಯ ಮುಂದೆ ಹಿಂದೂ ಸಂಘಟನೆ ಮುಖಂಡರ ಹಾಗೂ ಗ್ರಾಮಸ್ಥರು ಜಮಾಯಿಸಿದ್ದು ಠಾಣೆಯ ಗೇಟ್‌ ಹಾಕಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಏಕಾಏಕಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿ ಹಿಂದೂ ಮುಖಂಡರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಂತೆ ಪೊಲೀಸರು ಸಂಘಟನಾಕಾರರು ಮತ್ತು ಗ್ರಾಮಸ್ಥರನ್ನು ಮನವೊಲಿಸಲು ಹರಸಾಹಸ ಪಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!