Friday, February 13, 2026
Homeಜಿಲ್ಲಾಸುದ್ದಿಮೂಡಿಗೆರೆ: ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಕಸದ ರಾಶಿ ರಾಶಿ: ಪಟ್ಟಣ ಪಂಚಾಯಿತಿ ವಿರುದ್ದ...

ಮೂಡಿಗೆರೆ: ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಕಸದ ರಾಶಿ ರಾಶಿ: ಪಟ್ಟಣ ಪಂಚಾಯಿತಿ ವಿರುದ್ದ ಆಕ್ರೋಶ

ಮೂಡಿಗೆರೆ: ಪಟ್ಟಣದ ಬೀಜುವಳ್ಳಿ ಗ್ರಾಮದಲ್ಲಿ ಇರುವ ನೀರಿನ ಘಟಕದ ಬಳಿ ಕಸದ ರಾಶಿ ಹಾಕಿದ್ದು. ಕಸ ತೆರವಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಹೌದು .. ಮೂಡಿಗೆರೆ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಇದಾಗಿದ್ದು ಪಟ್ಟಣ ಪಂಚಾಂಯಿತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

ಕಸದ ರಾಶಿ ಕೊಳೆತು ನಾರುತ್ತಿದ್ದೂ ಮೂಗುಮುಚ್ಚಿ ನಡೆದಾಡುವ ದುಃಸ್ಥಿತಿ ನಿರ್ಮಾಣವಾಗಿದೆ. ನಗರದ ಬಿಜುವಳ್ಳಿ ಗ್ರಾಮದಲ್ಲಿ ಮಾರ್ಗದಲ್ಲಿ ಕಸದ ರಾಶಿಯ ದೃಶ್ಯ ಗಳನ್ನು ಪಬ್ಲಿಕ್ ಇಂಪ್ಯಾಕ್ಟ್ ಸೆರೆ ಹಿಡಿದಿದ್ದು, ನಗರದ ಜನತೆ ಸಾಂಕ್ರಾಮಿಕ ರೋಗಗಳು ಹರಡುವ ಭಯದಲ್ಲಿದ್ದಾರೆ.

ಕುಡಿಯುವ ನೀರಿನ ಸುತ್ತ ಮುತ್ತ ಸ್ವಚ್ಛವಾಗಿಡದೆ ಪಟ್ಟಣ ಪಂಚಾಯಿತಿ ಬೇಜವಾಬ್ದಾರಿತನ ತೋರುತ್ತಿದ್ದೂ. ಇಲ್ಲಿನ ಅಧ್ಯಕ್ಷರು ಕಮಿಷನ್ ಕಡೆ ಗಮನ ಹರಿಸುವುದನ್ನು ಬಿಟ್ಟು ಸಾರ್ವಜನಿಕರ ಹಿತ ಕಾಪಾಡುವ ಕೆಲಸ ಮಾಡಬೇಕು ಎಂದು ಸಾರ್ವಜನಿಕರು ಹರಿಹಾಯ್ದರು ಕಸದ ರಾಶಿ ಕೊಳೆತು ನಾರುತ್ತಿದ್ದೂ ವಾಯುವಿಹಾರಕ್ಕೆ ಶುದ್ಧ ಗಾಳಿಯು ಸಿಗುತ್ತಿಲ್ಲ ದುರ್ವಾಸನೆಯಿಂದ ನಡೆದಾಡಲು ಕಷ್ಟವಾಗುತ್ತಿದೆ. ಬಿಜುವಳ್ಳಿ ಮುಖ್ಯರಸ್ತೆಯಲ್ಲಿ ಕಸವೇ ತುಂಬಿದೆ ಮೂಗುಮುಚ್ಚಿಕೊಂಡು ಓಡಾಡುವ ದುಃಸ್ಥಿತಿ ನಿರ್ಮಾಣ ವಾಗಿದೆ.

ಇದೂ ಸಾಲದು ಎಂಬಂತೆ ಅಕ್ಕ ಪಕ್ಕದಲ್ಲಿರುವ ಖಾಲಿ ನಿವೇಶನಗಳೂ ಕಸದ ತೊಟ್ಟಿಗಳಾಗಿವೆ ಮಾರ್ಪಟ್ಟಿವೆ. ಈಗಲೂ ಸುತ್ತಮುತ್ತಲಿನ ನಿವಾಸಿಗಳು ಕಸವನ್ನು ಖಾಲಿ ನಿವೇಶನ, ಪಾದಚಾರಿ ಮಾರ್ಗ, ಮುಖ್ಯರಸ್ತೆಯ ಬದಿಯಲ್ಲಿ ಎಸೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಯಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಕಸದಿಂದ ಸೊಳ್ಳೆಗಳು, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತಿದ್ದು, ಜನರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ದನ ಕರುಗಳು ಕಸದ ರಾಶಿಯಲ್ಲಿ ಸಿಗುವ ಪ್ಲಾಸ್ಟಿಕ್‌ ತಿನ್ನುತ್ತಿವೆ. ಖಾಲಿ ನಿವೇಶನಗಳಲ್ಲಿನ ಕಸವನ್ನು ನಾಯಿಗಳು ರಸ್ತೆಗೆ ತಂದು ಹಾಕುತ್ತಿವೆ. ಇದರಿಂದಾಗಿ ವಾಹನಗಳ ಸಂಚಾರಕ್ಕೂ ಧಕ್ಕೆಯಾಗುತ್ತಿರುವುದರಿಂದ ಟ್ರಾಫಿಕ್‌ನ ಸಮಸ್ಯೆ ಉಂಟಾಗುತ್ತಿದೆ. ಶುದ್ಧ ನೀರಿನ ಕೊರತೆ ಎದ್ದು ಕಾಣುತ್ತಿದ್ದೂ ಸಿಬ್ಬಂದಿ 15 ದಿನ ಅಥವಾ ತಿಂಗಳಿಗೊಮ್ಮೆ ಮಾತ್ರ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ದೂರಿದರು.

ಸುತ್ತಮುತ್ತಲಿನ ವಾತಾವರಣ ದುರ್ವಾಸನೆಯಿಂದ ಕೂಡಿರುವುದರಿಂದ ಗಾಡಿ ವ್ಯಾಪಾರಿಗಳಿಂದ ಆಹಾರ ಪದಾರ್ಥಗಳನ್ನು ಕೊಳ್ಳಲು ಭಯವಾಗುತ್ತಿದೆ. ನೀರಿನ ಟ್ಯಾಂಕ್ ಆಸುಪಾಸಿನಲ್ಲಿ ಕಸದ ರಾಶಿ ಇರುವುದರಿಂದ ರೋಗ ರುಜಿನಿಗಳು ಬಂದರೆ ಪಟ್ಟಣ ಪಂಚಾಯಿತಿ ನೇರ ಹೊಣೆ ಹೊರಬೇಕು. ಪಕ್ಕದಲ್ಲಿ ಹೊಳೆ ಹರಿಯುತ್ತಿದ್ದೂ ಜಾನುವಾರುಗಳಿಗೂ ಕುಡಿಯಲು ಕಲುಷಿತ ನೀರು ದೊರಕುತ್ತಿದೆ

ಹಾಗಾಗಿ ಅಲ್ಲಿನ ಪಟ್ಟಣ ಪಂಚಾಯಿತಿ ಇನ್ನಾದರೂ ಎಚ್ಛೆತ್ತುಕೊಂಡು ಕಸ ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!