Saturday, February 14, 2026
Homeಜಿಲ್ಲಾಸುದ್ದಿಕೊಪ್ಪ: ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ: ಈ ಫೋಟೋದಲ್ಲಿರುವ ದಂಪತಿಯಿಂದ ಕೃತ್ಯ, ಮಾಹಿತಿ...

ಕೊಪ್ಪ: ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ: ಈ ಫೋಟೋದಲ್ಲಿರುವ ದಂಪತಿಯಿಂದ ಕೃತ್ಯ, ಮಾಹಿತಿ ನೀಡಲು ಮನವಿ

ಚಿಕ್ಕಮಗಳೂರು: ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಮನೆಯಲ್ಲಿ 750 ಗ್ರಾಂ ಚಿನ್ನ ಹಾಗೂ 6 ಲಕ್ಷ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಕೊಪ್ಪ ಪಟ್ಟಣದ ಹೊರವಲಯದಲ್ಲಿರುವ ಮಣಿಪುರದ ತಮ್ಮ ನಿವಾಸದಲ್ಲಿ ನಡೆದಿದೆ.

ಹೌದು .. ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ಪುತ್ರ ಇರುವ ಹೆಚ್.ಜಿ.ವೆಂಕಟೇಶ್ ಅವರ ನಿವಾಸದಲ್ಲಿ ಇಂದು ಬೆಳಗ್ಗೆ (ಆಗಸ್ಟ್‌ 21) ಸುಮಾರು 1:30 ರಿಂದ 3:00 ಘಂಟೆಯ ಸುಮಾರಿಗೆ ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಕಳುವು ಮಾಡಲಾಗಿದೆ.

ಕಳೆದೆರಡು ವಾರಗಳ ಕೆಳಗೆ ಬೇರೆ ಊರಿನಿಂದ ಬಂದ ದಂಪತಿಗಳು ಕೆಲಸಕ್ಕೆ ಸೇರಿದ್ದರು. ಈ ದಂಪತಿಗಳೇ ಕಳ್ಳತನದ ಕೃತ್ಯ ಎಸಗಿ ಪರಾರಿಯಾಗಿರುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿದ್ದು ದಯಮಾಡಿ ಇವರುಗಳು ಎಲ್ಲೇ ಕಂಡರೂ ತಕ್ಷಣ ಹತ್ತಿರದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಸ್ಥಳೀಯ ಪೊಲೀಸರು ಮನವಿ ಮಾಡಿದ್ದಾರೆ.

ವರದಿ: ವಿಠ್ಠಲ್ ಶೃಂಗೇರಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!