ಚಿಕ್ಕಮಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ಪ್ರಯಾಣಿಕರೊಬ್ಬರು ಬಿದ್ದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕೊಪ್ಪ ತಾಲೂಕಿನ ಕುದುರೆಗುಂಡಿಯಲ್ಲಿ ನಡೆದಿದೆ.
ಹೌದು .. ತಿಂಗಳುಗಳ ಹಿಂದೆ ಮಡಬೂರಿನಲ್ಲಿ ರಸ್ತೆಗುಂಡಿಯಿಂದಾಗಿ ಒಂದು ಸಾವಾಗಿದ್ದು ಹಾಗೆ ಹಾಗಲಮನೆ – ಗುಳದಮನೆ ರಸ್ತೆ ಗುಂಡಿಯಿಂದಾಗಿ ಶಾಲೆಗೆ ಹೋಗುವ ವಿದ್ಯಾರ್ಥಿನಿಯ ಕಾಲು ಮುರಿತಗೊಂಡಿದೆ. ಈಗ ನೋಡಿದರೆ ಈ ಘಟನೆ ಸಂಭವಿಸಿದೆ ಎಂದು ಅಲ್ಲಿನ ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ. ಇದರಿಂದ ಬೇಸತ್ತ ಚಿಕ್ಕಮಗಳೂರಿನ ಜನರು ನಮ್ಮ ಕ್ಷೇತ್ರದ ಶಾಸಕರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಗೊತ್ತಿದ್ದವರು ಮಾಹಿತಿ ನೀಡಿ ಎಂದು ಜಾಹೀರಾತು ನೀಡಿದ್ದಾರೆ.
