ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ 24 ಅಧಿಕಾರಿಗಳನ್ನ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಇಂದಿನಿಂದ ಸೆಪ್ಟಂಬರ್ 28ರವರೆಗೆ ಅವರು ಜಿಲ್ಲೆಯಲ್ಲಿ ನಿಗದಿ ಪಡಿಸಿರುವ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.

ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯಲ್ಲಿನ ಶಾಂತಿ ಭದ್ರತೆ ಸುವ್ಯವಸ್ಥೆ ಕಾಪಾಡುವ ಎಲ್ಲಾ ಅಧಿಕಾರ ಬಳಸಲು ಸೂಚನೆ ನೀಡಲಾಗಿದೆ. ಸಾರ್ವಜನಿಕರ ಶಾಂತಿಗೆ ಧಕ್ಕೆಯಾಗದಂತೆ ಹಾಗೂ ಅಹಿತಕರ ಪರಿಸ್ಥಿತಿಗಳನ್ನು ತಡೆಯುವುದು, ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನಚ್ಚೆರಿಕೆ ಕ್ರಮ ಕೈಕೊಳ್ಳುವುದು ಹಾಗೆ ತುತ್ರು ಸಂದರ್ಭಗಳ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿ ನೀಡಲಾಗಿದೆ.

ಹಾಗೆ ಜಿಲ್ಲಾಡಳಿತದ ಪ್ರಕಾರ ಈ ಕ್ರಮದಿಂದ ಹಬ್ಬದ ಸಮಯದಲ್ಲಿ ಜನರು ಯಾವುದೇ ಭಯವಿಲ್ಲದೇ ಓಡಾಡಬಹುದು ಹಾಗೆ ಪೊಲೀಸ್ ಇಲಾಖೆ ಇತರ ಇಲಾಖೆಗಳ ಸಹಕಾರ ಇರುವುದು ಎಂದ ತಿಳಿಸಲಾಗಿದೆ.
