ಹಾಸನ : ರಸ್ತೆಗೆ ಅಡ್ಡಲಾಗಿ ಮರ ಬೀಳಿಸಿದ ದೈತ್ಯಾಕಾರದ ಒಂಟಿಸಲಗ ವಾಹನಗಳ ಓಡಾಟಕ್ಕೆ ದಾರಿಯಲ್ಲಿ ಅಡ್ಡಲಾಗಿ ನಿಂತ ಕಾಡಾನೆ ಈ ದೃಶ್ಯ ಕಂಡು ಬಂದಿದ್ದು ಸಕಲೇಶಪುರ ತಾಲ್ಲೂಕಿನ ಹಳ್ಳಿಬೈಲು ಗ್ರಾಮದಲ್ಲಿ ನಡೆದಿದೆ.
ಹೌದು .. ಬೈನೆ ಮರವನ್ನು ರೋಡಿನ ಮಧ್ಯ ನೆಲಕ್ಕುರುಳಿಸಿ ತಿನ್ನುತ್ತಾ ನಿಂತ ಕಾಡಾನೆ ಇದರಿಂದಾಗಿ ಕೆಲಕಾಲ ರಸ್ತೆಯಲ್ಲಿಯೇ ನಿಂತ ವಾಹನಗಳು ಹೀಗಾಗಿ ಮಳೆಯ ನಡುವೆ ವಾಹನ ಸವಾರರು ಪರದಾಟ ನಡೆಸಿದರು ಹಾಗೆ ವಿಡಿಯೋ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ ವಾಹನ ಚಾಲಕರು
ಆ ನಂತರ ಸ್ಥಳಕ್ಕೆ ಆಗಮಿಸಿ ಪಟಾಕಿ ಸಿಡಿಸಿದ ಅರಣ್ಯ ಇಟಿಎಫ್ ಸಿಬ್ಬಂದಿ ಆಗ ಪಟಾಕಿ ಶಬ್ದಕ್ಕೆ ಕಾಡಿನೊಳಗೆ ಹೋದ ಒಂಟಿಸಲಗ ನಂತರ ಸುರಿಯುತ್ತಿರುವ ಮಳೆಯಲ್ಲಿಯೇ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಮರ ತೆರವು ಕಾರ್ಯ ನಡೆಯಿತು!
