Sunday, August 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಅದ್ದೂರಿ ಮೆರವಣಿಗೆಯೊಂದಿಗೆ ಗಣಪತಿ ಮೂರ್ತಿಗೆ ಗುಡ್ ಬೈ ಹೇಳಿದ ಕಡಿದಾಳು ಗ್ರಾಮಸ್ಥರು

ಮೂಡಿಗೆರೆ: ಅದ್ದೂರಿ ಮೆರವಣಿಗೆಯೊಂದಿಗೆ ಗಣಪತಿ ಮೂರ್ತಿಗೆ ಗುಡ್ ಬೈ ಹೇಳಿದ ಕಡಿದಾಳು ಗ್ರಾಮಸ್ಥರು

Telegram Group
Join Now

ಮೂಡಿಗೆರೆ: ಹಿಂದೂಗಳನ್ನು ಒಗ್ಗೂಡಿಸುವ ಸಲುವಾಗಿ ಗಣಪತಿ ಹಬ್ಬವನ್ನು ಕಡಿದಾಳು ಗ್ರಾಮಸ್ಥರು ಸಡಗರ ಸಂಭ್ರಮದಿಂದ ಆಚರಿಸಿ ಗಣೇಶನಿಗೆ ವಿದಾಯ ಹೇಳಿದರು.

ಗ್ರಾಮದ ಜನತೆ ಈ ಬಾರಿ ತಮ್ಮ ನೆಚ್ಚಿನ ಗಣೇಶನಿಗೆ ಅದ್ದೂರಿ ವಿದಾಯ ಹೇಳಿದ್ದು, ಭಾನುವಾರ ಬೆಳಿಗ್ಗೆ ಗಣಪತಿ ಮೂರ್ತಿ ಭಕ್ತಿ ಪೂರ್ವಕವಾಗಿ ಪೂಜಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ವಿಸರ್ಜನೆ ಮಾಡಲಾಯಿತು

ಭಾನುವಾರ ಬೆಳಗ್ಗೆ ಆರಂಭವಾದ ವಿಸರ್ಜನೆ ಮೆರವಣಿಗೆಗಳು ರಾತ್ರಿಯಿಡೀ ಸುಗಮವಾಗಿ ನಡೆದಿದ್ದು, ಗ್ರಾಮದ ಹೇಮಾವತಿ ನದಿಗೆ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು

ಪ್ರತಿ ವರ್ಷದಂತೆ ಮೂರ್ತಿಯನ್ನು ದಾನಿಗಳು ನೀಡಿದ್ದು ಐದು ದಿನಗಳ ಕಾಲ ಪೂಜೆ ಪುನಸ್ಕಾರಗಳು ನಡೆದಿದ್ದು ಭಕ್ತರ ದೌಡು ಹೆಚ್ಚಿತ್ತು. ಮೆರವಣಿಗೆ ಸಂದರ್ಭದಲ್ಲಿ ಹಿರಿಯರು. ಕಿರಿಯರು. ಮಹಿಳೆಯ ರು, ಮಕ್ಕಳು ನಿಶಾನಿ ಶಬ್ದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು

ಇದೆ ವೇಳೆ ಐದು ದಿನಗಳ ಕಾಲ ಗಣಪತಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಅರ್ಚಕರನ್ನ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಸದಸ್ಯರು, ಕಡಿದಾಳು ಗ್ರಾಮದ ಸಕಲ ಗ್ರಾಮಸ್ಥರು ಭಗವಂತನ ಕೃಪೆಗೆ ಪಾಲ್ಗೊಂಡು ಪುನೀತಾರಾದರೂ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments