Friday, February 13, 2026
Homeಜಿಲ್ಲಾಸುದ್ದಿಆಲೂರು: ಗ್ರಾಮದೊಳಗೆ ಮತ್ತೆ ಪ್ರತ್ಯಕ್ಷನಾದ ಭೀಮ : ರೇಡಿಯೋ ಕಾಲರ್ ಅಳವಡಿಸಿರುವ ಕೆಪಿ ಕಾಲರ್

ಆಲೂರು: ಗ್ರಾಮದೊಳಗೆ ಮತ್ತೆ ಪ್ರತ್ಯಕ್ಷನಾದ ಭೀಮ : ರೇಡಿಯೋ ಕಾಲರ್ ಅಳವಡಿಸಿರುವ ಕೆಪಿ ಕಾಲರ್

ಬೇಲೂರು: ಆಲೂರು ತಾಲೂಕಿನ ಕೆ ಹೊಸಕೋಟೆ ಹೋಬಳಿ ಅಬ್ಬನ ಗ್ರಾಮ ಪಂಚಾಯಿತಿಯ ಆಚಗೌಡನಹಳ್ಳಿಗ್ರಾಮದಲ್ಲಿ ಮತ್ತೆ ಪ್ರತ್ಯಕ್ಷನಾಗಿ ಎರಡು ದಿನಗಳಿಂದ ಬೀಡು ಬಿಟ್ಟು ಆಚೆಗೂಡನಹಳ್ಳಿ ಫಾರೆಸ್ಟ್ ನಲ್ಲಿ ಬಿಟ್ ಹಾಕುತ್ತಿರುವ ತಾಲೂಕಿನ ಹೆಸರಾಂತ ಕಾಡಾನೆ ಭೀಮ ಮತ್ತು ಮತ್ತೊಂದು ಆನೆಯಾದ ರೇಡಿಯೋ ಕಾಲರ್ ಅಳವಡಿಸಿರುವ ಕೆಪಿ ಕಾಲರ್ ಎಂಬ ಆನೆಗಳೆರಡು ಹಿಂಡು ಆನೆಗಳ ಸಹವಾಸ ಬಿಟ್ಟು, ಇತ್ತೀಚೆಗೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತೇವೆ.

ಆಲೂರು – ಸಕಲೇಶಪುರ ಭಾಗದಲ್ಲಿ ಭೀಮ ಎಂಬ ಹೆಸರು ಮಾಡಿರುವ ದೈತ್ಯ ಸಲಗ ಈ ಭಾಗದ ಎಲ್ಲರಿಗೂ ಚಿರ ಪರಿಚಿತನಾಗಿದ್ದು, ಈಗ ಕೆಪಿ ಕಾಲರ್ ಎಂಬ ಆನೆಯ ಜೊತೆ ಸ್ನೇಹ ಬೆಳಸಿ ಈ ಭಾಗದ ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಇಷ್ಟು ದಿನ ಒಬ್ಬಂಟಿಯಾಗಿ ಬೀಟ್ ಹಾಕುತ್ತಿದ್ದ ಭೀಮ ಈಗ ಕೆಪಿ ಕಾಲರ್ ಜೊತೆಗೂಡಿ ಬಿಟ್ ಹಾಕುತ್ತಿರುವ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಈ ಎರಡು ಆನೆಗಳು ಗುಂಪು ಆನೆಗಳನ್ನು ಬಿಟ್ಟು ಇತ್ತೀಚೆಗೆ ಎರಡು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತೇವೆ. ಆಚಗೌಡನಹಳ್ಳಿ ಗ್ರಾಮದಲ್ಲಿ ಎರಡು ದಿನಗಳಿಂದ ಈ ಎರಡು ಆನೆಗಳು ಕಾಣಿಸಿಕೊಳ್ಳುತ್ತಿದ್ದು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಆರ್‌ಎಫ್ಓ ಸುನಿಲ್ ರಾಥೋಡ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಾವುದೇ ಅಹಿತಕರ ಘಟನೆ ನಡೆದಂತೆ ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲ ಸಾರ್ವಜನಿಕರಿಗೆ ಆನೆಗಳು ಇರುವ ಬಗ್ಗೆ ಪ್ರಚಾರ ಮಾಡುತ್ತಿದ್ದು ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಹೋಗುವ ಕೆಲಸಗಾರರು ಶಾಲಾ ಕಾಲೇಜು ಮಕ್ಕಳು ಸಾರ್ವಜನಿಕರು ಮನೆಯಿಂದ ಹೊರಗೆ ಓಡಾಡುವಾಗ ಎಚ್ಚರಿಕೆಯಿಂದ ಓಡಾಡಲು ಮನವಿ ಮಾಡಲಾಗಿದೆ.

ಈ ಆನೆಗಳನ್ನು ಕಾಡಿಗೆ ಹಟ್ಟುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಆದರೂ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು, ಆನೆಗಳ ಶಾಶ್ವತ ಸ್ಥಳಾಂತರ ಕಾಣದೆ ಭಯದಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!