ಚಿಕ್ಕಮಗಳೂರು: ಕಾಲು ಜಾರಿ ಹೊಳೆಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹ ಮಂಗಳವಾರ ಸಿಕ್ಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬುಕ್ಕಡಿಬೈಲಿನಲ್ಲಿ ನಡೆದಿದೆ.
ಹೌದು .. ಶೃಂಗೇರಿ ತಾಲೂಕಿನ ಬುಕ್ಕಡಿಬೈಲು ಸಮೀಪದ ಮಿನಿಗರಡಿಯ ಚಂದ್ರೆಗೌಡ ಎಂಬುವವರು ಕಳೆದ ಗುರುವಾರ ಅಂದರೆ ಆಗಸ್ಟ್ 28 ರಂದು ರಾತ್ರಿ 8 ಗಂಟೆ ವೇಳೆಗೆ ಮನೆಗೆ ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದ್ದರು.
ಆದರೆ ನಿನ್ನೆ ಮಂಗಳವಾರ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ನೀರಿನಲ್ಲಿ ಪತ್ತೆಯಾಗಿದೆ.
ಘಟನಾ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ವಿಠಲ್ ಶೃಂಗೇರಿ!
