ಚಿಕ್ಕಮಗಳೂರು: ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ 24 ಶಿಕ್ಷಕರಿಗೆ ಈ ಬಾರಿ ಕಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸೆ. 9ರಂದು ಮೂಡಿಗೆರೆಯ ರೈತ ಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಜಿಲ್ಲೆಯ ಎಂಟು ಶೈಕ್ಷಣಿಕ ಬ್ಲಾಕ್ ಗಳಿಂದ ಮೂರು ವಿಭಾಗಗಳಲ್ಲಿ 24 ಜನ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಪತ್ರ ಹಾಗೂ 5 ಸಾವಿರ ರೂ. ಬಹುಮಾನ ನೀಡಲಾಗುತ್ತಿದೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೀರೂರು ವಲಯದ ನಿಡಘಟ್ಟ ಕಿರಿಯ ಪ್ರಾಥಮಿಕ ಶಾಲೆಯ ಬಿ.ಟಿ. ಕೃಷ್ಣಶೆಟ್ಟಿ, ಚಿಕ್ಕಮಗಳೂರು ವಲಯದ ನರಗನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಸಿ.ಕೆ. ವಿಜಯಲಕ್ಷ್ಮಿ, ಕಡೂರು ವಲಯದ ತಂಗಲಿ ಶಾಲೆಯ ನುಸ್ರತ್ ಬಾನು, ಕೋಪ ವಲಯದ ತನುಡಿ ಶಾಲೆಯ ಜ್ಯೋತಿ ಡಿಸೋಜಾ, ಮೂಡಿಗೆರೆ ವಲಯದ ಹೇರಡಿಕೆ ಶಾಲೆಯ ಜಿ.ಕೆ.ಶ್ರೀನಿವಾಸಮೂರ್ತಿ, ಎನ್.ಆರ್.ಪುರ ತಾಲೂಕು ಭದ್ರಕಾಲನಿ ಶಾಲೆಯ ಚಂದ್ರಕಲಾ, ಶೃಂಗೇರಿ ವಲಯದ ಸಿಂಧುವಳ್ಳಿ ಶಾಲೆಯ ಎಂ.ಎಂ.ಪ್ರಮೀಳಾ, ತರೀಕೆರೆ ವಲಯದ ಕೆಂಚಿಕೊಪ್ಪ ಶಾಲೆಯ ಎಚ್.ಓ.ಬಸವರಾಜಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬೀರೂರು ಬಿ.ಕೋಡಿಹಳ್ಳಿ ಶಾಲೆಯ ಎಚ್.ಓ.ಬಲರಾಮ, ಚಿಕ್ಕಮಗಳೂರು ವಲಯದ ನಗರ 2 ಕ್ಲಸ್ಟರ್ ನ ಬಿಟಿಎಚ್ ಪಿಎಸ್ ಶಾಲೆಯ ಕೆ.ಎ.ಹರೀಶ್ ಕುಮಾರ್, ಕಡೂರು ವಲಯದ ಮರವಂಜಿ ಶಾಲೆಯ ಕೆ.ಜೆ. ವಿಜಯ್ ಕುಮಾರ್, ಕೊಪ್ಪ ವಲಯದ ಅತ್ತಿಕುಳಿ ಶಾಲೆಯ ಓ.ಗುರುಸ್ವಾಮಿ, ಮೂಡಿಗೆರೆ ವಲಯದ ಮುತ್ತಿಗೆಪುರದ ಎಸ್. ಭಾರತಿ, ಎನ್.ಆರ್.ಪುರ ವಲಯದ ಕಾನೂರು ಶಾಲೆಯ ಕೆ.ಮಂಜುಳಾ, ಶೃಂಗೇರಿ ವಲಯದ ಧರೆಕೊಪ್ಪ ಶಾಲೆಯ ಎಚ್.ಎಚ್.ದಿನೇಶ್, ತರೀಕೆರೆ ವಲಯದ ಕುಡ್ಲೂರು ಶಾಲೆಯ ಎಚ್.ಲೋಹಿತ್ ಕುಮಾರ್ ಅವರಿಗೆ ಪ್ರಶಸ್ತಿ ಒಲಿದಿದೆ.
ಇನ್ನು ಪ್ರೌಢಶಾಲಾ ವಿಭಾಗದಲ್ಲಿ ವಲಯದ ಬಳ್ಳಿಗನೂರು ಶಾಲೆಯ ಸುವರ್ಣ ಎಸ್ ವಡೆಯರ್, ಚಿಕ್ಕಮಗಳೂರು ವಲಯದ ಮೈಲಿಮನೆ ಶಾಲೆಯ ಎಂ.ಬಿ.ಚಂದ್ರೇಗೌಡ, ಕಡೂರು ವಲಯದ ಮತ್ತಿಘಟ್ಟ ಶಾಲೆಯ ವಿ.ಎನ್.ಪ್ರಕಾಶ್, ಕೊಪ್ಪ ವಲಯದ ಬಂಡಿಗಡಿ ಶಾಲೆಯ ಎನ್.ಎನ್.ಸುರೇಂದ್ರ, ಮೂಡಿಗೆರೆ ವಲಯದ ಅಂಗಡಿ ಗ್ರಾಮ ಶಾಲೆಯ ಮಂಜಪ್ಪ ದೊಡ್ಡಮನಿ, ಎನ್.ಆರ್.ಪುರ ವಲಯದ ಮಾಗುಂಡಿ ಶಾಲೆಯ ರಮೇಶ ನಾಯಕ, ಶೃಂಗೇರಿ ವಲಯದ ಶೃಂಗೇರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕೆ.ಶಶಿಧರ್, ತರೀಕೆರೆ ವಲಯದ ಹಳೆಯೂರು ಶಾಲೆಯ ಎಚ್.ಕೆ.ಶೇಖರಪ್ಪ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
