Saturday, February 14, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಈದ್ ಮಿಲಾದ್ ಹಬ್ಬದ ಪ್ರಯುಕ್ತ ರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬುಕ್‌...

ಚಿಕ್ಕಮಗಳೂರು: ಈದ್ ಮಿಲಾದ್ ಹಬ್ಬದ ಪ್ರಯುಕ್ತ ರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬುಕ್‌ ವಿತರಣೆ!

ಚಿಕ್ಕಮಗಳೂರು:  ಪ್ರವಾದಿ ಮೊಹಮ್ಮದ್ ಪೈಗಂಬರ್ ಜನ್ಮದಿನ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಮೊಹರಂ ಚಾರಿಟೆಬಲ್ ಟ್ರಸ್ಟ್ ಹಾಗೂ ಮೊಹರಂ ಮುಜವರ್ ಕಮಿಟಿ ವತಿಯಿಂದ ನಗರದ ತಮಿಳು ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಲೇಖನಿ ಪರಿಕರ, ನೋಟ್‌ಪುಸ್ತಕ ವಿತರಿಸುವ ಮೂಲಕ ಶನಿವಾರ ಅರ್ಥಪೂರ್ಣವಾಗಿ ಆಚರಿಸಿದರು.

ಈ ವೇಳೆ ಮಾತನಾಡಿದ ಮೊಹರಂ ಮುಜಾವರ್ ಕಮಿಟಿ ಅಧ್ಯಕ್ಷ ವಜೀರ್ ಅಹಮದ್ ಈದ್ ಮಿಲಾದ್ ಹಬ್ಬವು ಮುಸಲ್ಮಾನರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು ಈ ದಿನವನ್ನು ಪ್ರವಾದಿಯವರ ದಯೆ, ಸಹಾನುಭೂತಿ ಮತ್ತು ಶಾಂತಿಯ ಬೋಧನೆಗಳನ್ನು ನೆನಪಿಸಿಕೊಳ್ಳುವ ಮತ್ತು ಗೌರವಿಸುವ ದಿನವೆಂ ದು ಪರಿಗಣಿಸಲಾಗಿದೆ ಎಂದರು.

ಸದಸ್ಯ ರಾಹಿಲ್ ಪಾ? ಮಾತನಾಡಿ ಪ್ರತಿಯೊಬ್ಬರೂ ಈದ್ ಮಿಲಾದ್ ಹಬ್ಬವನ್ನು ವಿವಿಧ ರೀತಿ ಯಲ್ಲಿ ಆಚರಿಸುತ್ತಾರೆ. ಆದರೆ ನಾವು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲಿಕಾ ವಸ್ತುಗಳನ್ನು ನೀಡುವುದರ ಮೂಲಕ ಈದ್ ಮಿಲಾದ್ ಹಬ್ಬವನ್ನು ಆಚರಿಸಿ ಪ್ರೇರಣೆಯಾಗುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಕಮಿಟಿ ಸದಸ್ಯರಾದ ಅಝರ್ ಪಾ?, ಮೊಹಮ್ಮದ್ ಖಾಸಿಂ, ನಾಸಿರ್, ಸಲ್ಮಾನ್, ಇರ್ಫಾನ್, ಅಸ್ಲಾಂ, ಅಕ್ಬರ್, ಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!