ಚಿಕ್ಕಮಗಳೂರು: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಹಾಗೂ ಚಿಕ್ಕಮಗಳೂರಲ್ಲಿ ಡಿಜೆ ಬಳಕೆ ಮಾಡಿದ್ದಕ್ಕೆ ಎಫ್ಐಆರ್ ದಾಖಲು ವಿಚಾರಕ್ಕೆ ಸಂಬಂಧಿಸದಂತೆ ರಾಜ್ಯ ಸರ್ಕಾರದ ವಿರುದ್ಧ ಎಂಎಲ್ಸಿ ಸಿ.ಟಿ ರವಿ ಅವರು ವಾಗ್ದಾಳಿ ನಡೆಸಿದ್ದಾರೆ
ಇಂದು ಚಿಕ್ಕಮಗಳೂರು ನಗರದಲ್ಲಿ ಮಾಧ್ಯಮಗಳ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಕಾಲ ಹೀಗೆಯೇ ಇರಲ್ಲ ಎಲ್ಲದಕ್ಕೂ ಕಾಲವೇ ಉತ್ತರಿಸುತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ, ಆಗ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಪ್ರತಿಭಟಿಸಿದವರ ಮೇಲೆ ಲಾಠಿಚಾರ್ಜ್ ಆಗಿದೆ ನಾಗಮಂಗಲದಲ್ಲಿ ಕಳೆದ ವರ್ಷ ಪೆಟ್ರೋಲ್ ಬಾಂಬ್ ಹಾಕಿದ್ರು 35ಕ್ಕೂ ಹೆಚ್ಚು ಅಂಗಡಿಗಳನ್ನು ಟಾರ್ಗೆಟ್ ಮಾಡಿ ಸುಟ್ಟುಹಾಕಿದ್ರು ಈ ಬಾರಿ ಮದ್ದೂರಿನಲ್ಲಿ ಟಾರ್ಗೆಟ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ ನನಗನ್ನಿಸುತ್ತೆ ಇದೊಂದು ಟೆಸ್ಟ್ ಡೋಸ್ ಎಂದು ಹೇಳಿದರು.
ಹಾಗೆ ಹಿಂದೂ ಸಮಾಜ ಮತ್ತು ಸರ್ಕಾರ ಯಾವ ರೀತಿ ಮಾಡುತ್ತೆ ಅಂತ ಟೆಸ್ಟ್ ಡೋಸ್ ಕೊಡುತ್ತಿದ್ದಾರೆ ಸಾಮಾಜಿಕ ಕಂದಕ ಮಾಡುವ ಷಡ್ಯಂತ್ರ ನಡೆದಿದೆ ಸಾಗರದಲ್ಲಿ ಚಿಕ್ಕ ಮಕ್ಕಳು ಗಣೇಶ ಮೂರ್ತಿಯ ಮೇಲೆ ಉಗುಳುತ್ತಾರೆ ಈ ರೀತಿ ದ್ವೇಷ ಹೇಗೆ ಸೃಷ್ಟಿಯಾಯಿತು ಈ ರೀತಿಯ ಮತೀಯ, ಧಾರ್ಮಿಕ ಧ್ವೇಷವನ್ನ ಪೋಷಕರು ಬಿತ್ತುತ್ತಿದ್ದಾರೆ..? ಮದರಸಾಗಳು ಬಿತ್ತುತ್ತಿದ್ದಾವೋ ತಿಳಿಯದು ಎಂದು ಕಿಡಿಕಾರಿದರು.
ಆ ನಂತರ ಎಳೆಯ ಮಕ್ಕಳಲ್ಲಿ ಮತೀಯ ಧ್ವೇಷ ಬಿತ್ತುವ ಕೆಲಸವಾಗುತ್ತಿದೆ 2 ದಿನದ ಹಿಂದೆ ಮುಖ್ಯಮಂತ್ರಿಗಳು ಹೊಗಳಿಕೆಯ ಪರಾಕಾಷ್ಟೆ ತೋರಿಸಿದರು ಇಸ್ಲಾಂ ಅಂದ್ರೆ ಶಾಂತಿ, ಬಾಬರ್, ಪೈಗಂಬರ್ ಅಂದ್ರೆ ಶಾಂತಿದೂತ ಎಂದಿದ್ರು ಜಾಗತಿಕ ವಿದ್ಯಮಾನಗಳು ಅದನ್ನ ಅಲ್ಲಗಳೆದಿವೆ ನಮಗೆ ಬಹಳ ಕಹಿಯಾದ ಅನುಭವವಿದೆ, ಆ ಅನುಭವ ಮುಖ್ಯ ಮಂತ್ರಿಗಳ ಹೇಳಿಕೆಯಲ್ಲಿ ಸತ್ಯವಿಲ್ಲ ಅನ್ನೋದನ್ನ ಸಾಬೀತು ಮಾಡಿದೆ ಹೊಗಳಿಕೆಯ ಭರದಲ್ಲಿ ಸತ್ಯಕ್ಕೆ ಅಪಚಾರ ಬಯಸಿದ್ದಾರೆ ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಇತಿಹಾಸ ಮರೆತು ವರ್ತಿಸಿದ್ರೆ ಭಯಂಕರ ವಿನಾಶವಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಘ್ದಾಳಿ ನಡೆಸಿದರು.
ಹಾಗೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಿ ಅವರನ್ನು ಬಂಧಿಸಬೇಕು. ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಿ ಕ್ರೌರ್ಯದ ಪರಾಕಾಷ್ಟೆಯನ್ನ ಮೆರೆದಿದ್ದೀರಾ? ನಿಮ್ಮ ಈ ಒಂದು ತಪ್ಪಿಗೆ ಕ್ಷಮೆ ಇಲ್ಲ ಕಾಲ ಎಲ್ಲದಕ್ಕೂ ಉತ್ತರ ನೀಡುತ್ತೆ ನೀವು ತುಂಬಾ ಕೆಟ್ಟದಾಗಿ ವರ್ತನೆ ಮಾಡಿದ್ದೀರಾ ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಇವರ ಕೆಲಸ ಅದನ್ನು ಬಿಟ್ಟು ಹೇಗ್ ಕುಣಿಬೇಕು, ಏನು ಊಟ ಮಾಡಬೇಕು ಯಾವುದು ಡಿಜೆ ಹಾಕ್ಬೇಕು, ಬೇಡ್ವೊ ಅದು ಇವರ ಕೆಲಸವಲ್ಲ ಈ ರೀತಿ ಮಾಡುವ ಮೂಲಕ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣದ ನೀತಿ ಅನುಸರಿಸುತ್ತಿದ್ದಾರೆ ಸಂವಿಧಾನದ ಸಮಾನತೆ ಸ್ವಾತಂತ್ರ್ಯದ ನೀತಿಗೆ ಬಗೆಯುವ ದ್ರೋಹದ ಕೆಲಸ ಮಾಡಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಎಂಎಲ್ಸಿ ಸಿ.ಟಿ ರವಿ ಸರ್ಕಾರದ ವಿರುದ್ಧ ತೀವ್ರ ವಾಗ್ಗದಾಳಿ ನಡೆಸಿದರು.
