Saturday, February 14, 2026
Homeಜಿಲ್ಲಾಸುದ್ದಿಚನ್ನರಾಯಪಟ್ಟಣ: ವಿದ್ಯುತ್ ಅವಘಡ ನಿಯಂತ್ರಣಕ್ಕೆ 10 ಕೋಟಿ ವೆಚ್ಚದಲ್ಲಿ ಕೇಬಲ್‌ ಅಳವಡಿಕೆ: ಶಾಸಕ ಸಿ.ಎನ್.ಬಾಲಕೃಷ್ಣ

ಚನ್ನರಾಯಪಟ್ಟಣ: ವಿದ್ಯುತ್ ಅವಘಡ ನಿಯಂತ್ರಣಕ್ಕೆ 10 ಕೋಟಿ ವೆಚ್ಚದಲ್ಲಿ ಕೇಬಲ್‌ ಅಳವಡಿಕೆ: ಶಾಸಕ ಸಿ.ಎನ್.ಬಾಲಕೃಷ್ಣ

ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳನ್ನು ನಿಯಂತ್ರಿಸಲು 10 ಕೋಟಿ ರೂ. ವೆಚ್ಚದಲ್ಲಿ ಹೊಸ ಕೇಬಲ್‌ಗಳನ್ನು ಅಳವಡಿಸ ಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ 7ನೇ ವಾರ್ಡ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, “ಪಟ್ಟಣ ವ್ಯಾಪ್ತಿಯಲ್ಲಿ 60 ಕಿ.ಮೀ. ಎಲ್‌ಟಿ ಕೇಬಲ್ ಹಾಗೂ 80 ಕಿ. ಮೀ. ಪವರ್ ಕಂಡಕ್ಟರ್‌ಗಳನ್ನು ಅಳವಡಿಸುವುದರಿಂದ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದಾಗಿದೆ,”ಎಂದು ಹೇಳಿದರು.

ಈ ಕುರಿತು ಆಗಿಂದಾಗ್ಗೆ ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ಸಚಿವ ಕೆ.ಜೆ.ಜಾರ್ಜ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು. ಶ್ರವಣ ಬೆಳಗೊಳದಲ್ಲಿ ಯುಜಿ ಕೇಬಲ್ ಅನ್ನು 5 ಕೋಟಿ ರೂ. ವೆಚ್ಚದಲ್ಲಿ ಅಳವಡಿಸಲು ಪ್ರಸ್ತಾವನೆ ಸಲ್ಲಿಸ ಲಾಗಿದೆ. ಕಲ್ಕೆರೆ ಬಳಿ 220 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಟೆಂಡ‌ರ್ ಹಂತದಲ್ಲಿದೆ, ”ಎಂದು ತಿಳಿಸಿದರು.

ಮುಂಬರುವ ಶ್ರವಣಬೆಳಗೊಳ ಮತ್ತು “ತಾಲೂಕಿನಲ್ಲಿ ಮುಂದಿನ 25 ವರ್ಷ ವಿದ್ಯುತ್ ಸಮಸ್ಯೆ ಎದುರಾಗದಂತೆ ಎಚ್ಚರವಹಿಸ ಲಾಗಿದೆ.

ಹೋಬಳಿಗಳಲ್ಲಿ ನಿರಂತರ ವಿದ್ಯುತ್ ಸರಬರಾಜಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರ ಕಾಠ್ಯರೂಪಕ್ಕೆ ಬರುವ ವಿಶ್ವಾಸವಿದೆ. ವೋಲ್ವೇಜ್ ಸಮಸ್ಯೆಗಳನ್ನು ನಿವಾರಿಸಿ ಹೆಚ್ಚುವರಿಯಾಗಿ ಟಿಸಿಗಳನ್ನು ಅಳವಡಿಸಬೇಕು,”ಎಂದು ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಸೆಸ್ಕ್ ಇಇ ರತ್ನ, ಎಇಇ ಕೃಷ್ಣ ಹರೀಶ್, ಪುರಸಭಾಧ್ಯಕ್ಷ ಸಿ.ಎನ್‌.ಮೋಹನ್, ಉಪಾಧ್ಯಕ್ಷೆ ಕವಿತಾ ರಾಜು, ಸ್ಥಾಯಿಸಮಿತಿ ಅಧ್ಯಕ್ಷ ಎಸ್.ಎ. ಗಣೇಶ್, ನಗರ ಯೋಜನಾ ಪ್ರಾಧಿಕಾರದ ದಿನಗಳಲ್ಲಿ ಮಾಜಿ ಅಧ್ಯಕ್ಷಎಚ್.ಆರ್.ವೆಂಕಟೇಶ್, ದಂಡಿಗನಹಳ್ಳಿರ್ ನ ಪ್ರಮುಖರು ಹಾಜರಿದ್ದರು.

“ಇದೊಂದು ವಿಶೇಷ ಕಾಯಕ್ರಮವಾಗಿದ್ದು, ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ನೂತನ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!