Saturday, August 8, 2026
Homeಜಿಲ್ಲಾಸುದ್ದಿಬೇಲೂರು: ಬಿಕ್ಕೋಡಿನ ಆರಕ್ಷಕ ಠಾಣೆಗೆ ಯುಪಿಎಸ್ ಕೊಡುಗೆ ಕೊಟ್ಟ ಸ್ಥಳೀಯ ಯುವಕ ಮಿತ್ರರು!

ಬೇಲೂರು: ಬಿಕ್ಕೋಡಿನ ಆರಕ್ಷಕ ಠಾಣೆಗೆ ಯುಪಿಎಸ್ ಕೊಡುಗೆ ಕೊಟ್ಟ ಸ್ಥಳೀಯ ಯುವಕ ಮಿತ್ರರು!

Telegram Group
Join Now

ಹಾಸನ : ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡಿನ ಆರಕ್ಷಕ ಠಾಣೆಯ ವತಿಯಿಂದ ಸಿಸಿಟಿವಿ ಅಳವಡಿಸಿದ್ದು ವಿದ್ಯುತ್ ಇಲ್ಲದ ಸಮಯದಲ್ಲಿ ಸಿಸಿಟಿವಿ ಕೆಲಸ ಮಾಡದ ಕಾರಣ ಸ್ಥಳೀಯ ಯುವಕ ಮಿತ್ರರು ಇಂದು ಬಿಕ್ಕೋಡು ಆರಕ್ಷಕ ಠಾಣೆಗೆ ಯುಪಿಎಸ್ ಅನ್ನು ಕೊಡುಗೆಯಾಗಿ ನೀಡಲಾಯಿತು…

ಠಾಣೆಯ ಪೊಲೀಸ್ ಅಧಿಕಾರಿಯಾದ ರವಿ ರವರು ಬಿಕ್ಕೋಡಿಗೆ ಸುರಕ್ಷತೆ ದೃಷ್ಟಿಯಲ್ಲಿ CCTV ಮತ್ತು ಅದಕ್ಕೆ ಬೇಕಾದ UPS ಹಾಕಿಸುವಲ್ಲಿ ಸ್ಥಳೀಯ ಯುವಕರ ಮನವೊಲಿಸಿ ಯಶಸ್ವಿಯಾಗಿದ್ದು ಬಿಕ್ಕೋಡಿನ ಸುರಕ್ಷೆ ದೃಷ್ಟಿಯಲ್ಲಿ ಶ್ರಮ ವಹಿಸಿದ ರವಿರವರನ್ನು ಊರಿನ ಮುಖಂಡರುಗಳು ಅಭಿನಂದಿಸಿದರು…

ಬೇಲೂರು ವೃತ್ತ ನಿರೀಕ್ಷಕರಾದ ಜಗದೀಶ್ , ಗಣಪತಿ ಸೇವಾ ಸಮೀತಿಯ ಅಧ್ಯಕ್ಷರಾದ ರವಿ,ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆಸೀಫ್ ಬಿಕ್ಕೋಡ್ , ಸೊಸೈಟಿ ಅಧ್ಯಕ್ಷರಾದ ಭರತ್ ರವರು ನಿರ್ದೇಶಕ ರಾದ ಚಂದನ್ ಗೌಡ ,ಇರಕರವಳ್ಳಿ ಮಂಜು,ಕೈಮರ ಅಲೀಂ , ಕೋಡಿಹಳ್ಳಿ ದೇವ, ಮುಚ್ಚಿಲ್ಮನೆ ಪ್ರವೀಣ್ , ಸಂದೇಶ್ ಕೃತಿಕಾ ಮೊಬೈಲ್ಸ್, ಸಂದೀಪ್ ಜೆಸಿಬಿ, ಸಚಿನ್ ನೀಡುಮನಹಳ್ಳಿ ಇನ್ನೂ ಅನೇಕರು ಭಾಗವಹಿಸಿದ್ದರು..

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments