Sunday, March 29, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಮದ್ದೂರು ಗಲಾಟೆ ಕೇಸ್:‌ ತನಿಖೆ ಆಗುವವರೆಗೂ ಏನೂ ಹೇಳಲ್ಲ: ಚೆಲುವರಾಯಸ್ವಾಮಿ

ಚಿಕ್ಕಮಗಳೂರು: ಮದ್ದೂರು ಗಲಾಟೆ ಕೇಸ್:‌ ತನಿಖೆ ಆಗುವವರೆಗೂ ಏನೂ ಹೇಳಲ್ಲ: ಚೆಲುವರಾಯಸ್ವಾಮಿ

ಚಿಕ್ಕಮಗಳೂರು : ಮಂಡ್ಯದ ಮದ್ದೂರು ಗಣಪತಿ ಗಲಾಟೆ ಪ್ರಕರಣದಲ್ಲಿ ಸ್ವಲ್ಪ ವೈಫಲ್ಯದ ಅನುಮಾನ ಇದ್ದು ತನಿಖೆ ಆಗುವವರೆಗೂ ಏನೂ ಹೇಳಲ್ಲ ಇಂದಿರುವ ಕೃಷಿ ಸಚಿವ ಚೆಲುವರಾಯಸ್ವಾಮಿ ಪೂರ್ಣ ಮಾಹಿತಿ ಪಡೆದ ಬಳಿಕ ಎಲ್ಲದರ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಗ್ಯಾರಂಟಿ ಎಂದಿದ್ದಾರೆ.

ಚಿಕ್ಕಮಗಳೂರಲ್ಲಿ ಮಂಡ್ಯ ಉಸ್ತುವಾರಿ ಸಚಿವರು ಆದ ಕೃಷಿ ಸಚಿವ ಚೆಲುವನಾರಾಯಣಸ್ವಾಮಿ ಮಾತನಾಡಿ ಬಿಜೆಪಿ-ಜೆಡಿಎಸ್ ನವರು ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಹಿಂದೂಗಳನ್ನು ಅರೆಸ್ಟ್ ಮಾಡಿಲ್ಲ, ಯಾರ ಮೇಲೂ ಎಫ್.ಐ.ಆರ್. ಹಾಕಿಲ್ಲ.ಪೂರ್ಣ ಪ್ರಮಾಣದಲ್ಲಿ ಮುಸ್ಲಿಂ ಕಡೆಯಿಂದಲೇ ಗಲಾಟೆ ಆಗಿದ್ದು ಹಲವರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮದ್ದೂರಿನ ಶಾಂತಿ ಸಭೆಗೆ ಬಿಜೆಪಿಯವರು  ಗೈರಾದರೆ ಏನಂತೆ ಜನ ಹಾಜರಿದ್ದರಲ್ಲ, ಎರಡೂ ಕೋಮುವಿನ ಜನ ಸಮಾಧಾನದಿಂದ ಇದ್ದರೆ ಅದೇ ಸಮಾಧಾನ ಎಂದು ಹೇಳಿದರು. ಅವರಿಗೆ ಶಾಂತಿ ಬೇಕಿಲ್ಲ, ಅದಕ್ಕೆ ಶಾಂತಿ ಸಭೆಗೆ ಬಂದಿಲ್ಲ, ಅವರಿಗೆ ಶಾಂತಿಯೇ ಬೇಕಿಲ್ಲ ಹೇಗೆ ಬರ್ತಾರೆ ಎಂದೂ ಪ್ರಶ್ನಿಸಿದರು

ಕ್ರಮ ತೆಗೆದುಕೊಂಡು ಮೇಲೂ ಸಭೆ ಮಾಡ್ತಿರೋದು ರಾಜಕೀಯ.ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ಬಿಜೆಪಿಯಿಂದ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಬಗ್ಗೆ ಪ್ರಸ್ತಾಪಿಸಿಬಿಜೆಪಿಯವರಿಗೆ ನಾಚಿಕೆ ಆಗಬೇಕು, ಅವರ ಕಾಲದಲ್ಲಿ ಈ ರೀತಿ ಘಟನೆ ಎಷ್ಟು ಆಗಿಲ್ಲ ಎಂದು ಪ್ರಶ್ನೆ ಹಾಕಿದರು.

ಕಾಂಗ್ರೆಸ್ ಬಂದಾಗಲೇ ಹೀಗೆ ಆಗುತ್ತೆ ಅನ್ನೋದು ಸುಳ್ಳು, ಅವರು ಒಮ್ಮೆ ಹಿಂದೆ ತಿರುಗಿ ನೋಡಲಿ ,ಬಂಧಿತರಲ್ಲಿ ಇಬ್ಬರು ಚನ್ನಪಟ್ಟಣದವರು, ಉಳಿದವರೆಲ್ಲ ಮದ್ದೂರು ಟೌನ್ ನವರು ಎಂದರು. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಪ್ರಕರಣದ ಬಗ್ಗೆ ಮಾತನಾಡಿ ಸತ್ಯ ಗೊತ್ತಾಗಬೇಕು, ಧಾರ್ಮಿಕ ಸ್ಥಳಕ್ಕೆ ಕಳಂಕ ಇರಬಾರದು ಎನ್ನುವ ಉದ್ದೇಶದಿಂದ ಎಸ್.ಐ.ಟಿ. ತನಿಖೆ  ನಡೆಯುತ್ತಿದೆ, ತನಿಖೆ ಕುರಿತ ಹೆಚ್ಚು ಮಾಹಿತಿ ಗೃಹ ಸಚಿವರು ಹೇಳಬೇಕೆಂದರು.

ನಾವೂ ಮಂಜುನಾಥ ಸ್ವಾಮಿ-ಶಿವನ ಭಕ್ತರೇ, ಅವರಿಗೆ ಮಾತ್ರ ಮಂಜುನಾಥನ ಪ್ರತಿ  ಪಕ್ಷಗಳಿಗೆ ಗುತ್ತಿಗೆ ಕೊಟ್ಟಿಲ್ಲ, ಸರ್ಕಾರದ ವಿರುದ್ಧ ಮಾತನಾಡಲು ವಿಷಯ ಇಲ್ಲದೆ ಈ ವಿಷಯ ಮುಖ್ಯವಾಗಿದೆ ಎಂದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!